Indonesia: ಇಂಡೋನೇಷ್ಯಾದಲ್ಲಿ ಇಸ್ಲಾಮಿಕ್ ಬೋರ್ಡಿಂಗ್ ಶಾಲಾ ಕಟ್ಟಡ ಕುಸಿದು ಬಿದ್ದ ನಂತರ ಮೃತಪಟ್ಟ ವಿದ್ಯಾರ್ಥಿಗಳ ಸಂಖ್ಯೆ 36 ಕ್ಕೆ ಏರಿಕೆಯಾಗಿದೆ ಎಂದು ದೇಶದ ವಿಪತ್ತು ತಗ್ಗಿಸುವಿಕೆ ಸಂಸ್ಥೆ ಭಾನುವಾರ (ಸೆಪ್ಟೆಂಬರ್,05) ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಂಡೋನೇಷ್ಯಾದ ವಿಪತ್ತು ಸಂಸ್ಥೆ, ಕುಸಿದು ಬಿದ್ದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ 27 ವಿದ್ಯಾರ್ಥಿಗಳ ಹೆಚ್ಚಾಗಿ 13 ರಿಂದ 19 ವರ್ಷ ವಯಸ್ಸಿನ ಹದಿಹರೆಯದ ಹುಡುಗರಿದ್ದು, ಶವಗಳನ್ನು ಹುಡುಕಲು 7ನೇ ದಿನವೂ ಪ್ರಯತ್ನಗಳು ಮುಂದುವರೆದಿವೆ ಎಂದು ಹೇಳಿದೆ.
ಬಿದ್ದ ಅವಶೇಷಗಳನ್ನು ಅಗೆಯಲು ಕ್ರೇನ್‌ಗಳನ್ನು ನಿಯೋಜಿಸಲಾಗಿದ್ದು, ಶೋಧ ಮತ್ತು ಸ್ಥಳಾಂತರಿಸುವ ಪ್ರಯತ್ನಗಳು 60% ಪೂರ್ಣಗೊಂಡಿವೆ. ಸೋಮವಾರ ಎಲ್ಲಾ ಅವಶೇಷಗಳನ್ನು ತೆರವುಗೊಳಿಸಿ ಶೋಧ ಕಾರ್ಯವನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಈ ಘಟನೆಯು ಪೂರ್ವ ಜಾವಾ ಪ್ರಾಂತ್ಯದ ಸಿಡೋರ್ಜೊ ಪಟ್ಟಣದಲ್ಲಿರುವ ಅಲ್ ಖೋಜಿನಿ ಶಾಲೆಯು ಕಳೆದ ಸೋಮವಾರ ಮಧ್ಯಾಹ್ನ ಪ್ರಾರ್ಥನೆಯ ಸಮಯದಲ್ಲಿ ನೂರಾರು ಹದಿಹರೆಯದ ವಿದ್ಯಾರ್ಥಿಗಳ ಮೇಲೆ ಕುಸಿದು ಬಿದ್ದಿದೆ. ಅಲ್ಲದೆ, ಹಿಂದಿನ ಪ್ರಯತ್ನಗಳ ಸಮಯದಲ್ಲಿ ಜೀವದ ಕುರುಹುಗಳು ಪತ್ತೆಯಾಗದ ಕಾರಣ, ಶುಕ್ರವಾರ, ರಕ್ಷಕರು ಭಾರೀ ಉಪಕರಣಗಳನ್ನು ಬಳಸಲು ಪೋಷಕರ ಅನುಮತಿಯನ್ನು ಪಡೆದಿದ್ದಾರೆ.
ರಕ್ಷಣಾ ಕಾರ್ಯಕರ್ತರು ಕಟ್ಟಡದ ಅವಶೇಷಗಳಲ್ಲಿ ಸುರಂಗಗಳನ್ನು ಅಗೆದು, ಹುಡುಗರ ಹೆಸರುಗಳನ್ನು ಕೂಗಿದ್ದಾರೆ. ಯಾವುದೇ ಚಲನೆಯನ್ನು ಪತ್ತೆಹಚ್ಚಲು ಸಂವೇದಕಗಳನ್ನು ಬಳಸಿದರು. ಆದರೆ ಜೀವಂತವಿರುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.
ಧಾರ್ಮಿಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ವಿಶ್ವದ ಅತಿದೊಡ್ಡ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾದ ಇಂಡೋನೇಷ್ಯಾದಲ್ಲಿ ಸುಮಾರು 42,000 ಪೆಸಾಂಟ್ರೆನ್‌ಗಳಿದ್ದು, 7 ಮಿಲಿಯನ್ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. (ಏಜೆನ್ಸೀಸ್)