ಬೆಂಗಳೂರು: ಸಿಂಗರೇಣಿ ಕಾಲರಿಸ್ ನಿಗಮ ನಿಯಮಿತವು(ಎಸ್‌ಸಿಸಿಎಲ್) ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಕಲ್ಲಿದ್ದಲು ಗಣಿಗಾರಿಕೆ ಘಟಕವಾಗಿದ್ದು, 1920ರಲ್ಲಿ ಸ್ಥಾಪನೆಗೊಂಡಿತು. ಇದು ದೇಶದಲ್ಲಿಯೇ ಅತ್ಯಂತ ಹಳೆಯ ಹಾಗೂ 2ನೇ ಅತಿದೊಡ್ಡ ಕಲ್ಲಿದ್ದಲು ಗಣಿಗಾರಿಕೆ ಸಂಸ್ಥೆಯಾಗಿದ್ದು, ದಕ್ಷಿಣ ಭಾರತದ ಪ್ರಮುಖ ನದಿ ಗೋದಾವರಿ ಕಣಿವೆಯಲ್ಲಿನ ಗಣಿಶೋಧನೆಗೆ ಹೆಸರುವಾಸಿಯಾಗಿದೆ. ಪ್ರತಿವರ್ಷ ಸುಮಾರು 52 ಮಿಲಿಯನ್ ಟನ್‌ನಷ್ಟು ಕಲ್ಲಿದ್ದಲನ್ನು ಉತ್ಪಾದಿಸುತ್ತಿದ್ದು, ಕರ್ನಾಟಕದ ಪವರ್ ಕಾರ್ಪೋರೇಷನ್ ಸೇರಿದಂತೆ 4 ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದಲನ್ನು ಪೂರೈಸುತ್ತಿದೆ. ಪ್ರಸ್ತುತ ನಿಗಮದಿಂದ ನೇಮಕಾತಿ ಅಧಿಸೂಚನೆ ಹೊರಬಿದ್ದಿದ್ದು, ವಿವಿಧ ವಿಭಾಗಕ್ಕೆ ಟ್ರೇನಿಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ.
ಒಟ್ಟು ಹುದ್ದೆ: 301
ಹುದ್ದೆ ವಿವರ
ಎಕ್ಸಿಕ್ಯೂಟಿವ್ ಕೇಡರ್
ಮ್ಯಾನೇಜ್‌ಮೆಂಟ್ ಟ್ರೇನಿ(ಇ-ಎಂ)E2 ಗ್ರೇಡ್ 49
ಮ್ಯಾನೇಜ್‌ಮೆಂಟ್ ಟ್ರೇನಿ(ಸಿಸ್ಟಮ್ಸ್)E2 ಗ್ರೇಡ್ 07
ನಾನ್-ಎಕ್ಸಿಕ್ಯೂಟಿವ್ ಕೇಡರ್
ಜೂನಿಯರ್ ಮೈನಿಂಗ್ ಇಂಜಿನಿಯರಿಂಗ್ ಟ್ರೇನಿ, ಟಿ-ಎಸ್ ಗ್ರೇಡ್ ಸಿ 100
ಅಸಿಸ್ಟೆಂಟ್ ಫೋರ್ಮನ್ ಟ್ರೇನಿ (ಮೆಕಾನಿಕಲ್), ಟಿ-ಎಸ್ ಗ್ರೇಡ್ ಸಿ 09
ಅಸಿಸ್ಟೆಂಟ್ ಫೋರ್ಮನ್ ಟ್ರೇನಿ(ಎಲೆಕ್ಟ್ರಿಕಲ್), ಟಿ-ಎಸ್ ಗ್ರೇಡ್ ಸಿ 24
ಫಿಟ್ಟರ್ ಟ್ರೇನಿ, ಕೆಟಗರಿ-1 47
ಎಲೆಕ್ಟ್ರೀಷಿಯನ್ ಟ್ರೇನಿ, ಕೆಟಗರಿ-1 98
ವಿದ್ಯಾರ್ಹತೆ ಹೀಗಿರಲಿ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಹುದ್ದೆಗೆ ಸಂಬಂಧಿಸಿ ವಿಷಯದಲ್ಲಿ ಡಿಪ್ಲೊಮಾ/ಬಿಇ/ಬಿ.ಟೆಕ್ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಈ ವಯಸ್ಸಿನವರಿಗೆ ಅವಕಾಶ
ಅಭ್ಯರ್ಥಿಯು ಅರ್ಜಿ ಸಲ್ಲಿಸುವ ದಿನಕ್ಕೆ 30 ವರ್ಷ ಮೀರಿರಬಾರದೆಂದು ನಿಗಮವು ಸ್ಪಷ್ಟಪಡಿಸದ್ದು, ಎಸ್ಸಿ/ಎಸ್ಟಿಯವರಿಗೆ 5 ವರ್ಷ ಹಾಗೂ ಒಬಿಸಿ ವರ್ಗದವರಿಗೆ 3 ವರ್ಷ ವಯೋಸಡಿಲಿಕೆ ನಿಗದಿಗೊಂಡಿದೆ.
ಆಯ್ಕೆ ಪ್ರಕ್ರಿಯೆ ಹೀಗಿರಲಿದೆ
ಶೈಕ್ಷಣಿಕ ಅರ್ಹತೆಯ ಜತೆಗೆ ಅಭ್ಯರ್ಥಿಯ ಸಾಮರ್ಥ್ಯ ಅರಿಯಲು ಎಸ್‌ಸಿಸಿಎಲ್ ನಿಗಮವು ಲಿಖಿತ ಪರೀಕ್ಷೆಯನ್ನು ಆಯೋಜಿಸಲಿದೆ. ಲಿಖಿತ ಪರೀಕ್ಷೆ ಹಾಗೂ ಕೌಶಲ ಪರೀಕ್ಷೆ ಎರಡರಲ್ಲೂ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಈ ಹಂತಗಳಲ್ಲಿ ಅಭ್ಯರ್ಥಿಯು ಗಳಿಸುವ ಅಂಕದ ಆಧಾರದ ಮೇಲೆ ಅಭ್ಯರ್ಥಿಗಳು ಆಯ್ಕೆಗೊಳ್ಳಲಿದ್ದು, ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯ ನಂತರ ಅರ್ಹರು ಕೆಲಸ ಪಡೆಯಲಿದ್ದಾರೆ.
ಅರ್ಜಿ ಸಲ್ಲಿಕೆ ಹಂತ
ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಿದ್ದು, ಇತರ ಯಾವುದೇ ರೂಪದಲ್ಲಿ ಸಲ್ಲಿಸಕೆಯಾಗುವ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ನಿಗಮವು ಎಚ್ಚರಿಕೆ ನೀಡಿದೆ. ಅಗತ್ಯ ದಾಖಲೆಗಳ ಸಹಿತ ಅಭ್ಯರ್ಥಿಯು scclmines.com ನಲ್ಲಿ ಲಭ್ಯವಿರುವ ಕೆರಿಯರ್ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು.
ವಿವರವಾದ ಅಧಿಸೂಚನೆ ಶೀಘ್ರದಲ್ಲಿ ಪ್ರಕಟಗೊಳ್ಳಲಿದ್ದು, ಇದೀಗ ಬಿಡುಗಡೆಗೊಂಡಿರುವ ಸಂಕ್ಷಿಪ್ತ ಅಧಿಸೂಚನೆಯ ಪ್ರತಿ ಇಲ್ಲಿದೆ
bit.ly/492TSxD
ಅರ್ಜಿ ಸಲ್ಲಿಕೆ ಪ್ರಾರಂಭ
15.04.2024
ಅರ್ಜಿ ಸಲ್ಲಿಕೆಗೆ ಅಂತಿಮ ದಿನ
04.05.2024