ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಿರ ಠೇವಣಿಗಳ (ಎಫ್ಡಿ) ಬಡ್ಡಿದರವನ್ನು ಹೆಚ್ಚಿಸಿದೆ. ಈ ಬಡ್ಡಿ ದರವು 2 ಕೋಟಿ ರೂಪಾಯಿಗಿಂತ ಕಡಿಮೆ ಎಫ್ಡಿಗಳಿಗೆ ಅನ್ವಯಿಸುತ್ತದೆ. ಹೊಸ ದರವು 2023 ಡಿಸೆಂಬರ್ 27ರಿಂದ ಜಾರಿಗೆ ಬರುತ್ತದೆ. ಒಂದು ವರ್ಷದಿಂದ 2 ವರ್ಷಕ್ಕಿಂತ ಕಡಿಮೆ, 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಮತ್ತು ಐದು ವರ್ಷದಿಂದ 10 ವರ್ಷಗಳನ್ನು ಹೊರತುಪಡಿಸಿ ಎಲ್ಲ ಅವಧಿಗಳ ಮೇಲಿನ ದರವನ್ನು ಹೆಚ್ಚಿಸಿದೆ.
7 ದಿನಗಳಿಂದ 45 ದಿನಗಳ ನಡುವಿನ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು 3 ಪ್ರತಿಶತದಿಂದ ಶೇ.3.50ರಷ್ಟು ಹೆಚ್ಚಿಸಿದೆ. 46 ದಿನಗಳಿಂದ 179 ದಿನಗಳ ನಡುವಿನ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.4.50 ರಿಂದ ಶೇ.4.75 ಕ್ಕೆ ಅಂದರೆ 25 ಬೇಸಿಸ್ ಪಾಯಿಂಟ್, 180 ದಿನಗಳಿಂದ 210 ದಿನಗಳವರೆಗೆ ಅವಧಿಗೆ 25 ಬಿಪಿಎಸ್ ಬಡ್ಡಿದರವನ್ನು 5.25 ಪ್ರತಿಶತದಿಂದ 5.75 ಪ್ರತಿಶತಕ್ಕೆ ಹೆಚ್ಚಿಸಿದೆ.
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಎ್ಡಿಗಳ ಮೇಲಿನ ಬಡ್ಡಿ ದರವನ್ನು 5.75 ಪ್ರತಿಶತದಿಂದ 6 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ. ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.6.50ರಿಂದ ಶೇ.6.75ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರು ಈ ಠೇವಣಿಗಳ ಮೇಲೆ ಹೆಚ್ಚುವರಿ 50 ಬೇಸಿಸ್ ಪಾಯಿಂಟ್ಗಳನ್ನು (ಬಿಪಿಎಸ್) ಪಡೆಯುತ್ತಾರೆ.