ನ್ಯೂಸ್

HDFC ಯೋಜನೆ ಮ್ಯಾಜಿಕ್..ತಿಂಗಳಿಗೆ 1ಸಾವಿರ ಸಿಪ್​ನೊಂದಿಗೆ 1.9ಕೋಟಿ ರೂ.ಆದಾಯ! ಎಷ್ಟು ವರ್ಷ ಹಿಡಿಯಿತು ಗೊತ್ತಾ!

ಮುಂಬೈ: ದುಡಿದು ಸಂಪಾದನೆ ಮಾಡುವಾಗ ಪ್ರತಿಯೊಬ್ಬರೂ ಭವಿಷ್ಯದತ್ತ ಗಮನ ಹರಿಸಬೇಕು. ಹಾಗೆ ಮಾಡುವುದರಿಂದ ನಿವೃತ್ತಿಯ ನಂತರ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಲು ಸಹಕಾರಿಯಾಗುತ್ತದೆ. ಆದರೆ ಉಳಿತಾಯ ಮತ್ತು ಹೂಡಿಕೆ ಮಾಡುವಾಗ ಉತ್ತಮ ಯೋಜನೆ ನಮ್ಮದಾಗಿರಬೇಕಾಗುತ್ತದೆ. ಸ್ಟಾಕ್ ಮಾರುಕಟ್ಟೆಗಳು, ಬ್ಯಾಂಕ್ ಸ್ಥಿರ ಠೇವಣಿಗಳು, ಕೇಂದ್ರ ಸರ್ಕಾರದ ಯೋಜನೆಗಳು, ಗೋಲ್ಡ್ ಬಾಂಡ್‌ಗಳು, ಮ್ಯೂಚುವಲ್ ಫಂಡ್‌ಗಳು ಹೂಡಿಕೆ ಮಾಡಲು ಹಲವು ಆಯ್ಕೆಗಳಾಗಿವೆ.

ಹೀಗಿದ್ದರೂ, ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚಿನ ಆದಾಯ ಬರುವ ಸಾಧ್ಯತೆ ಇದೆ. ಇಲ್ಲಿ ಅಪಾಯಕಾರಿ ಅಂಶವಿದ್ದರೂ, ಹೆಚ್ಚಿನ ಫಂಡ್‌ಗಳು ದೀರ್ಘಾವಧಿಯಲ್ಲಿ ಲಾಭವನ್ನು ನೀಡಿದ ಇತಿಹಾಸವನ್ನು ಹೊಂದಿವೆ. ಮ್ಯೂಚುವಲ್ ಫಂಡ್‌ಗಳಲ್ಲಿ ವಿಶೇಷವಾಗಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಹೂಡಿಕೆ ಮಾಡುವವರು ಉತ್ತಮ ಆದಾಯವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ಮ್ಯೂಚುಯಲ್ ಫಂಡ್ ಯೋಜನೆಗಳಲ್ಲಿ ಆರಂಭಿಕ ವರ್ಷಗಳಲ್ಲಿ ಆದಾಯ ಅಷ್ಟಾಗಿ ಇಲ್ಲದಿದ್ದರೂ, ಕಾಲ ಕಳೆದಂತೆ ಹೂಡಿಕೆಯ ಮೇಲೆ ಬಡ್ಡಿ, ಬಡ್ಡಿಗೆ ಬಡ್ಡಿ ಸಿಗುತ್ತದೆ. ಅಂತಹ ಒಂದು ನಿಧಿಯು ಎಚ್​ಡಿಎಫ್​ಎಫ್​ಸಿ(HDFC ) ಇಎಲ್​ಎಸ್​ಎಸ್​ ತೆರಿಗೆ ಸೇವರ್ ಮ್ಯೂಚುಯಲ್ ಫಂಡ್ ಆಗಿದೆ.

1996 ರಲ್ಲಿ ಈ ಯೋಜನೆ ಪ್ರಾರಂಭವಾದಾಗಿನಿಂದ 1000 ರೂ. ಸಿಪ್‌ಗಳನ್ನು 28ವರ್ಷ ಮಾಡುತ್ತ ಬಂದವರು ಈಗ ವಾರ್ಷಿಕವಾಗಿ 22.89 ಪ್ರತಿಶತದಷ್ಟು ಆದಾಯವನ್ನು ಪಡೆದಿದ್ದಾರೆ. ಈಗ ಅಕ್ಟೋಬರ್ 2024 ರವರೆಗೆ ಆ ಮೊತ್ತವು ರೂ. 1.9 ಕೋಟಿ ರೂ. ಆಗಿದೆ. ಸಿಪ್​ ವ್ಯವಸ್ಥೆಯಲ್ಲಿ ಸಣ್ಣ ಮೊತ್ತದಲ್ಲಿ ಹೂಡಿಕೆ ಮಾಡಲು ಅವಕಾಶವಿದೆ.

ಅದೇ ರೀತಿ ಏಕಕಾಲದಲ್ಲಿ ಹೂಡಿಕೆ ಮಾಡಲೂ ಅವಕಾಶವಿದೆ. ಒಂದು ಬಾರಿ 1 ಲಕ್ಷ ಹೂಡಿಕೆ ಮಾಡಿದವರಿಗೆ 1.36 ಕೋಟಿ ರೂ. ಆದಾಯ ಸಿಕ್ಕಿದೆ. ಈ ನಿಧಿಯು ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಇತ್ಯಾದಿಗಳಲ್ಲಿ ಹೆಚ್ಚು ಹೂಡಿಕೆಯಾಗುತ್ತಿದೆ. ಸಿಪ್ಲಾ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಕೂಡ ಇಂತಹ ಸ್ಕೀಂ ಹೊಂದಿದೆ.

ಬಲವಾದ ಮೂಲಭೂತ ಅಂಶಗಳನ್ನು ಹೊಂದಿರುವ ಷೇರುಗಳಲ್ಲಿ ಹೂಡಿಕೆ ಮಾಡುವಾಗ ಆದಾಯದ ಬಗ್ಗೆ ಚಿಂತಿಸಬೇಕಾಗಿಲ್ಲ. ಹೆಚ್ಚಾಗಿ ಈ ನಿಧಿಯು ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ.