ನ್ಯೂಸ್

ಹಜ್​ ಯಾತ್ರೆಗೆ ಮಕ್ಕಳು ನಿಷೇಧ; ಸೌದಿ ಅರೇಬಿಯಾ ಸರ್ಕಾರ ಘೋಷಣೆ: ಕಾರಣ ಹೀಗಿದೆ.. | Ban Children Hajj

Ban Children Hajj: ಸೌದಿ ಅರೇಬಿಯಾ ಸರ್ಕಾರ ಇದೀಗ ''ಹಜ್​ ಯಾತ್ರೆಗೆ ಮಕ್ಕಳ ನಿಷೇಧ'' ಕಾನೂನು ಜಾರಿ ಮಾಡಿದೆ. ಹಜ್​ ಯಾತ್ರೆಯ ಬಗ್ಗೆ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಯಾತ್ರೆಗೆ ಮಕ್ಕಳನ್ನು ಕರೆತರದಂತೆ ನಿಷೇಧ ಹೇರಿದೆ ಎಂದು ವರದಿಯಾಗಿದೆ.

ಹಜ್​ ಸಮಯದಲ್ಲಿ ಭಾರಿ ಪ್ರಮಾಣದ ಜನಸಂಖ್ಯೆ ಬರುತ್ತಿರುವುದರಿಂದ ಯಾವುದೇ ಅಹಿತಕ ಘಟನೆ(ಕಾಲ್ತುಳಿತ) ನಡೆಯದಂತೆ ನೋಡಿಕೊಳ್ಳಲು ಮತ್ತು ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಈ ಹೊಸ ಕಾನೂನು ಜಾರಿ ಮಾಡಲಾಗಿದೆ ಎಂದು ಸೌದಿ ಅರಬಿಯಾದ ಹಜ್​ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.

2025ರ ಹಜ್​ ಯಾತ್ರೆಗೆ ನೋಂದಣಿ ಆರಂಭವಾಗಿದೆ. ಈ ಬಾರಿ ಯಾತ್ರೆಗೆ ಬರುವವರಿಗೆ ಮಾತ್ರ ಇದು ಅನ್ವಹಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಹಜ್​​ ಮತ್ತು ಉಮ್ರಾಕ್ಕೆ ಸಂಬಂಧಿಸಿದ ತಮ್ಮ ನಿಯಮಗಳನ್ನು ಸೌದಿ ಸರ್ಕಾರ ಅಗ್ಗಾಗೆ ಬದಲಾಯಿಸುತ್ತಲೇ ಇದೆ. 2024ರಲ್ಲಿ ಗ್ರೇಟ್​ ಗ್ರ್ಯಾಂಡ್​ ಮಸೀದಿ ಬಳಿ ಜನ ಸಂದಣಿ ಇದ್ದ ಕಾರಣ ಛಾಯಚಿತ್ರ ತೆಗೆಯದಂತೆ ನಿಷೇಧ ಹೇರಿತ್ತು.(ಏಜೆನ್ಸೀಸ್​)