ಸ್ಯಾಂಡಲ್ವುಡ್ನಲ್ಲಿ ಕಳೆದ ವರ್ಷ ತೆರೆಕಂಡಿದ್ದ ಬೀರಬಲ್ ಟ್ರಯೋಲಜಿ ಮತ್ತು ಈ ವರ್ಷದಲ್ಲಿ ತೆರೆಕಂಡ ಲವ್ ಮಾಕ್ಟೇಲ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡ ಸಿನಿಮಾ. ಈ ಮೊದಲೇ ಹೇಳಿದಂತೆ ಈ ಎರಡು ಸಿನಿಮಾಗಳು ತೆಲುಗಿನಲ್ಲಿ ರಿಮೇಕ್ ಆಗುತ್ತಿವೆ. ಅಚ್ಚರಿ ವಿಚಾರ ಏನೆಂದರೆ, ಕನ್ನಡದ ಈ ಎರಡು ಸಿನಿಮಾಗಳ ತೆಲುಗು ರಿಮೇಕ್ನಲ್ಲಿ ಒಬ್ಬನೇ ನಾಯಕ ನಟಿಸಿಸುತ್ತಿರುವುದು ಕುತೂಹಲ ಮೂಡಿಸಿದೆ.
ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದ ಲವ್ ಮಾಕ್ಟೇಲ್ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಆ ಚಿತ್ರದಲ್ಲಿ ಸಮಂತಾ ಅಕ್ಕಿನೇನಿ ನಾಯಕಿಯಾಗಿ ನಟಿಸಲಿದ್ದು, ನಾಯನಾಗಿ ಸತ್ಯದೇವ್ ಕಾಣಿಸಿಕೊಳ್ಳಲಿದ್ದಾರೆ. ಹೀಗಿರುವಾಗಲೇ ಇದೇ ಸತ್ಯದೇವ್ ಮತ್ತೊಂದು ಕನ್ನಡದ ಚಿತ್ರದಲ ರಿಮೇಕ್ನಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಶ್ರೀನಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಥ್ರಿಲ್ಲರ್ ಶೈಲಿಯ ಬೀರಬಲ್ ಟ್ರಯೊಲಜಿ ಸಿನಿಮಾಸಹ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಈ ಚಿತ್ರದ ತೆಲುಗು ರಿಮೇಕ್ನಲ್ಲಿ ಅದೇ ಸತ್ಯದೇವ್ ಶ್ರೀನಿ ನಿಭಾಯಿಸಿದ ಪಾತ್ರವನ್ನು ನಿಭಾಯಿಸಲಿದ್ದಾರೆ. ತೆಲುಗಿನಲ್ಲಿ ಆ ಚಿತ್ರಕ್ಕೆ ತಿಮ್ಮರಸು ಎಂದು ಶೀರ್ಷಿಕೆ ಇಡಲಾಗಿದೆ.
ಈ ಎರಡು ಸಿನಿಮಾಗಳಿಗೆ ತೆಲುಗಿ ಇಂಡಸ್ಟ್ರಿಯಲ್ಲಿ ಬೇಡಿಕೆ ಬರಲು ಮುಖ್ಯ ಕಾರಣ ಅಮೆಜಾನ್ ಪ್ರೈಂ! ಆ ಓಟಿಟಿ ವೇದಿಕೆಯಲ್ಲಿ ತೆರೆಕಂಡ ಈ ಸಿನಿಮಾಗಳಿಗೆ ತೆಲುಗಿನಲ್ಲಿಯೂ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು. ಅದರ ಹಿನ್ನೆಲೆಯಲ್ಲಿಯೇ ಇದೀಗ ರಿಮೇಕ್ ಆಗುತ್ತಿವೆ.