ನ್ಯೂಸ್

ಬಹುಕೋಟಿ ಹಗರಣ; ಜಮ್ಮು-ಕಾಶ್ಮೀರ ಮಾಜಿ ರಾಜ್ಯಪಾಲರಿಗೆ ಸಿಬಿಐ ನೋಟಿಸ್​

Webdesk - Manjunatha B

ನವದೆಹಲಿ: ಇತ್ತಿಚಿಗೆ ಪುಲ್ವಾಮಾ ದಾಳಿ ಕುರಿತು ಹೇಳಿಕೆ ನಿಡಿದ ಸುದ್ದಿಯಲ್ಲಿದ್ದ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್​ಗೆ ಸಿಬಿಐ ನೋಟಿಸ್​ ಜಾರಿ ಮಾಡಿದೆ.

ಜಮ್ಮು-ಕಾಶ್ಮೀರದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಬಹುಕೋಟಿ ಹಗರಣ

ಕಳೆದ ವರ್ಷ ಏಪ್ರಿಲ್​ನಲ್ಲಿ ಮಲ್ಲಿಕ್​ ಕಿರು ಹೈಡ್ರೋ ಎಲೆಕ್ಟ್ರಿಕ್​ ಪವರ್​ ಪ್ರಾಜೆಕ್ಟ್​ ಹಾಗೂ ಸರ್ಕಾರಿ ನೌಕರರಿಗೆ ವಿಮಾ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಕುರಿತು ಮಲಿಕ್​ ಆರೋಪಿಸಿದ್ದರು.

ಮಲಿಕ್​ ಅವರು ಮಾಡಿರುವ ಆರೋಪಗಳ ಕುರಿತು ಸ್ಪಷ್ಟನೆ ನೀಡುವಂತೆ ಮತ್ತು ಸಾಕ್ಷ್ಯಾಧಾರಗಳಿದ್ದಲ್ಲಿ ಒದಗಿಸುವಂತೆ ಕೇಳಲಾಗಿದೆ. ಇತ್ತೀಚಿಗೆ ಖಾಸಗಿ ಸು್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಲಿಕ್​ ಭ್ರಷ್ಟಾಚಾರದ ವಿರುದ್ದ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವುದೇ ಒಲವಿಲ್ಲ ಎಂದು ಆರೋಪಿಸಿದ್ದರು.

ನಾನು ಸತ್ಯದ ಪರ ನಿಲ್ಲುತ್ತೇನೆ

ಈ ಕುರಿತು ಪ್ರತಿಕ್ರಿಯಿಸಿರುವ ಮಲಿಕ್​ ನನಗೆ ಯಾವುದೇ ನೋಟಿಸ್​ ನೀಡಿಲ್ಲ. ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವಂತೆ ತಿಳಿಸಲಾಗಿದೆ. ಏಪ್ರಿಲ್​ 28ರಂದು ದೆಹಲಿಯಲ್ಲಿರುವ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ಧಾರೆ.

ನಾನು ಸತ್ಯವನ್ನು ಹೇಳುವ ಮೂಲಕ ಕೆಲವರ ಪಾಪವನ್ನು ಬಯಲಿಗೆಳೆದಿದ್ದೇನೆ. ಬಹುಶಃ ಅದಕ್ಕಾಗಿಯೇ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ನಾನು ರೈತನ ಮಗನಾಗಿದ್ದು ಸತ್ಯದ ಪರ ನಿಲ್ಲುತ್ತೇನೆ ಎಂದು ಸತ್ಯಪಾಲ್​ ಮಲಿಕ್​ ಹೇಳಿದ್ದಾರೆ.