ಪ್ರಶ್ನೆ: ನಾನು ಸರ್ಕಾರಿ ಇಲಾಖೆಯೊಂದರಲ್ಲಿ ಬೆರಳಚ್ಚುಗಾರಳಾಗಿ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಮ್ಮ ಕಚೇರಿಯಲ್ಲಿನ ಶೀಘ್ರಲಿಪಿಗಾರರ ಹುದ್ದೆಗೆ ನಿಯಮ 32ರಂತೆ 2021ರ ಮಾರ್ಚ್ನಿಂದ ಪ್ರಭಾರದಲ್ಲಿರಿಸಿದ್ದಾರೆ. ಕಚೇರಿಯಲ್ಲಿ ಮೊದಲ 3 ತಿಂಗಳಿಗೆ ಶೇಕಡ 7.5, ನಂತರ 3 ತಿಂಗಳಿಗೆ ಶೇ.15 ಪ್ರಭಾರಭತ್ಯೆ ನೀಡುತ್ತಿದ್ದಾರೆ. ಬಳಿಕ ಪ್ರಭಾರದ ಆದೇಶ ಪರಿಷ್ಕರಿಸಿ ಮುಂದುವರಿದ 6 ತಿಂಗಳ ನಂತರ ಅವಧಿಗೆ ಶೇ.7.5 ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವೇ?
| ವಿಜಯಲ್ಮ, ರಾಯಚೂರು
ಉತ್ತರ: ದಿನಾಂಕ: 25-11-2019ರ ಕರ್ನಾಟಕ ಸರ್ಕಾರಿ ಆದೇಶ ಸಂಖ್ಯೆ: ಆಇ 05(ಇ) ಸೇನಿಸೇ 2019ರಂತೆ ಮೊದಲ ಮೂರು ತಿಂಗಳಿಗೆ ಶೇಕಡ 7.5 ಪ್ರಭಾರ ಭತ್ಯೆಯನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 68 ರಂತೆ ನಿಯತಗೊಳಿಸಬೇಕೆಂದು ಸೂಚಿಸಿದೆ. ಆದರೆ, ನಿಮ್ಮ ಕಚೇರಿಯಲ್ಲಿ ನಿಮಗೆ ನೀಡುತ್ತಿರುವ ಪ್ರಭಾರಭತ್ಯೆ ನಿಯತಗೊಳಿಸುತ್ತಿರುವುದು ಸರಿಯಾದ ಕ್ರಮವಲ್ಲ. ಈ ಆದೇಶದಂತೆ ಮೂರು ತಿಂಗಳ ನಂತರ ಎಷ್ಟೇ ಅವಧಿಯಾಗಿದ್ದರೂ ಪ್ರಭಾರ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ವೇತನಕ್ಕೆ ಅನುಗುಣವಾಗಿ ಶೇ.15 ಪ್ರಭಾರ ಭತ್ಯೆ ಮಂಜೂರು ಮಾಡಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು' ಪುಸ್ತಕ ನೋಡಬಹುದು.