ನಾನು ಸರ್ಕಾರಿ ನೌಕರನಾಗಿದ್ದು, ನನ್ನ ತಾಯಿಯು 9,000 ರೂ. ಪಿಂಚಣಿ ಪಡೆಯುತ್ತಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿ ಸೌಲಭ್ಯ ಲಭಿಸುವುದೇ?
| ರಾಜಪ್ಪ ಹಾಸನ
ಕರ್ನಾಟಕ ಸರ್ಕಾರಿ ನೌಕರರ(ವೈದ್ಯಕೀಯ ಚಿಕಿತ್ಸಾ) ನಿಯಮಾವಳಿ 1963ರ ನಿಯಮ 2ರಲ್ಲಿ ಸರ್ಕಾರಿ ನೌಕರರ ತಂದೆ -ತಾಯಿ ಪಿಂಚಣಿದಾರರಾಗಿದ್ದು, ಅವರು ಕನಿಷ್ಠ ವೇತನ ಮತ್ತು ಅದಕ್ಕೆ ಕಾಲಕಾಲಕ್ಕೆ ಲಭ್ಯವಾದ ತುಟ್ಟಿಭತ್ಯೆ ಒಳಗೊಂಡ ಮೊಬಲಕ್ಕಿಂತ ಹೆಚ್ಚು ಪಡೆಯುವ ಪಿಂಚಣಿದಾರರಾಗಿದ್ದಲ್ಲಿ ಅವರಿಗೆ ಈ ವೈದ್ಯಕೀಯ ವೆಚ್ಚದ ಮರುಪಾವತಿ ಸೌಲಭ್ಯ ಲಭ್ಯವಾಗುವುದಿಲ್ಲ. ಆದರೆ, ನಿಮ್ಮ ತಾಯಿಯು 9,000 ರೂ. ಪಡೆಯುತ್ತಿದ್ದು, ಅದು ಪ್ರಸ್ತುತ ಕನಿಷ್ಠ ವೇತನ 8,500 ರೂ. ಮತ್ತು ಅದಕ್ಕೆ ಲಭ್ಯವಾಗುವ ತುಟ್ಟಿಭತ್ಯೆ ಶೇ.11.25 ಕ್ಕಿಂತ ಕಡಿಮೆ ಇರುವುದರಿಂದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಅರ್ಹರಾಗಿರುತ್ತಾರೆ.