ನ್ಯೂಸ್

ಸರ್ಕಾರಿ ಕಾರ್ನರ್ | ನೇಮಕಾತಿಯಲ್ಲಿ ಹಲವು ವಿನಾಯಿತಿ

Webdesk - Ravikanth
ದಿನದ ಪ್ರಶ್ನೆ 

ಸರ್ಕಾರಿ ನೌಕರಿಯಲ್ಲಿರುವ ನಾನು ಕಾನೂನು ಪದವೀಧರನಾಗಿದ್ದು, ಇಲಾಖಾ ಪರೀಕ್ಷೆಯಲ್ಲಿ ಜನರಲ್ ಲಾ ಭಾಗ 1, 2 ವಿನಾಯಿತಿ ದೊರೆಯುತ್ತದೆಯೇ?

| ರಂಗಸ್ವಾಮಿ ಚಿತ್ರದುರ್ಗ

1974ರ ಕರ್ನಾಟಕ ಸಿವಿಲ್ ಸೇವಾ (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಾವಳಿಯ ನಿಯಮ 3ರ ಮೇರೆಗೆ ಪ್ರತಿಯೊಬ್ಬ ಸರ್ಕಾರಿ ನೌಕರನು ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯವಾಗಿರುತ್ತದೆ. ಆದರೆ, ಕಾನೂನು ಪದವೀಧರರು ಜನರಲ್ ಲಾ ಭಾಗ 1ರ ಪತ್ರಿಕೆ 1 ಹಾಗೂ ಜನರಲ್ ಲಾ ಭಾಗ 2 ಅನ್ನು ಸಂಪೂರ್ಣವಾಗಿ ವಿನಾಯಿತಿ ಹೊಂದಿರುತ್ತಾರೆ. ಜನರಲ್ ಲಾ ಭಾಗ 1ರ ಪತ್ರಿಕೆ 2ಕ್ಕೆ ಮಾತ್ರ ಕರ್ನಾಟಕ ಲೋಕಸೇವಾ ಆಯೋಗವು ಇಲಾಖಾ ಪರೀಕ್ಷೆಗಳಿಗಾಗಿ ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿಸಿದಂತೆ ಅರ್ಜಿ ನಮೂನೆಯನ್ನು ಆನ್​ಲೈನ್ ಮೂಲಕ ಸಲ್ಲಿಸುವಾಗ ಸಂಬಂಧಿತ ಅಂಕಣದಲ್ಲಿ ಈ ಬಗ್ಗೆ ವಿನಾಯಿತಿ ಕೋರಬಹುದು ಹಾಗೂ ಕಾನೂನು ಪದವಿ ಬಗ್ಗೆ ಮಾಹಿತಿ ನೀಡಿ ವಿನಾಯಿತಿ ಪಡೆಯಬಹುದು.