ನ್ಯೂಸ್

ಸರ್ಕಾರಿ ಕಾರ್ನರ್ | ಆದಾಯ ಸಿಂಧುತ್ವ ಪ್ರಮಾಣಪತ್ರ

Webdesk - Ravikanth
ದಿನದ ಪ್ರಶ್ನೆ 

ನಾನು, ಕಳೆದ 10 ವರ್ಷಗಳಿಂದ ಪ್ರೌಢಶಾಲಾ ಶಿಕ್ಷಕನಾಗಿದ್ದು, ನನ್ನ ಪತ್ನಿ ಒಂದು ತಿಂಗಳ ಹಿಂದೆ ಸರ್ಕಾರಿ ನೌಕರಿಗೆ ಸೇರಿದ್ದಾರೆ. ಆದಾಯ ಮತ್ತು ಜಾತಿ ಪ್ರಮಾಣಪತ್ರದ ಸಿಂಧುತ್ವಕ್ಕೆ ನನ್ನ ಆದಾಯ ಹಾಗೂ ಪತ್ನಿಯ ವೇತನಾದಯ ಅನ್ವಯವಾಗುವುದೇ? ಅಥವಾ ಅರ್ಜಿ ಸಲ್ಲಿಸಿದ್ದಾಗ ಇದ್ದ ಆದಾಯ ಪರಿಗಣಿತವಾಗುತ್ತದೆಯೇ?

| ಪ್ರಸನ್ನ ಕುಮಾರ್ ಗದಗ

1992 ಅನುಸೂಚಿತ ಜಾತಿ-ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ ನಿಯಮಾವಳಿ) 3ಎ ನಿಯಮಗಳ ರೀತ್ಯಾ ನೀವು ಅರ್ಜಿ ಸಲ್ಲಿಸಿದ್ದ ಕಡೆಯ ದಿನಾಂಕಕ್ಕೆ ಇರುವ ಆದಾಯವನ್ನು ಸಿಂಧುತ್ವ ಪ್ರಮಾಣಪತ್ರ ನೀಡಲು ಪರಿಗಣಿಸಲಾಗುತ್ತದೆ. ಪ್ರಸ್ತುತ ನಿಮ್ಮ ಪತ್ನಿಯ ವೇತನವನ್ನು ಈ ಆದಾಯಕ್ಕೆ ಪರಿಗಣಿಸುವಂತಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕ ನೋಡಬಹುದು.