ನ್ಯೂಸ್

ಸರ್ಕಾರಿ ಕಾರ್ನರ್ : ಅನುಕಂಪದ ನೇಮಕಕ್ಕೆ ದತ್ತು ಮಕ್ಕಳೂ ಅರ್ಹ

Webdesk - Ravikanth

ದಿನದ ಪ್ರಶ್ನೆ 

ನನ್ನ ಪತಿಯು ಸರ್ಕಾರಿ ಕೆಲಸದಲ್ಲಿರುವಾಗಲೇ ದಿನಾಂಕ: 7-7-2022ರಂದು ನಿಧನರಾದರು. ನಮಗೆ ಮಕ್ಕಳಿಲ್ಲದ ಕಾರಣಕ್ಕೆ ನನ್ನ ತಂಗಿಯ 5 ವರ್ಷದ ಮಗನನ್ನು ದತ್ತು ಪಡೆದು ಇಂಜಿನಿಯರಿಂಗ್ ಪದವಿವರೆಗೂ ಓದಿಸಿದ್ದೇವೆ. ಅವನಿಗೀಗ 24 ವರ್ಷ ವಯಸ್ಸು. ನಮ್ಮ ಮಗ ಸಕ್ಷಮ ಪ್ರಾಧಿಕಾರಕ್ಕೆ ಅನುಕಂಪದ ನೇಮಕಾತಿಗೆ ಅರ್ಜಿ ಸಲ್ಲಿಸಿದಾಗ ದತ್ತು ಮಕ್ಕಳಿಗೆ ಅವಕಾಶವಿಲ್ಲವೆಂದು ತಿರಸ್ಕರಿಸಿದ್ದಾರೆ. ಇದು ಸರಿಯೇ?

| ವಿಜಯಲಕ್ಷ್ಮೀ ಪಿ. ರಾವ್ ಹಾಸನ

1996ರ ಅನುಕಂಪದ ಮೇರೆಗೆ ನೇಮಕಾತಿ ನಿಯಮಾವಳಿಗೆ ದಿನಾಂಕ: 9-4-2021ರಿಂದ ಜಾರಿಗೆ ಬರುವಂತೆ ತಿದ್ದುಪಡಿಗೊಳಿಸಿ, ಮೃತ ಸರ್ಕಾರಿ ನೌಕರನ ದತ್ತು ಮಕ್ಕಳೂ ಅನುಕಂಪದ ನೇಮಕಾತಿಗೆ ಅರ್ಹರೆಂದು ಸೂಚಿಸಿದೆ. ಆದ್ದರಿಂದ ಈ ತಿದ್ದುಪಡಿಯ ಪ್ರಕಾರ ಮತ್ತೆ ನಿಮ್ಮ ಮಗ ಅನುಕಂಪದ ನೇಮಕಾತಿಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು.