ನಾನು ಸರ್ಕಾರಿ ನೌಕರನಾಗಿದ್ದು, 2017ರ ಜು.1ಕ್ಕೆ ವೇತನ ಶ್ರೇಣಿ 30,400 - 51,300 ರೂ.ಗಳಲ್ಲಿ 51,300 ರೂ. ಪಡೆಯುತ್ತಿದ್ದೇನೆ. ನೇಮಕಾತಿ ದಿನಾಂಕ 1987ರ ಏ.1 ಆಗಿದ್ದು, 2017ರ ಏ.1ಕ್ಕೆ 30 ವರ್ಷ ಸೇವೆ ಪೂರೈಸಿರುವುದರಿಂದ 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುತ್ತದೆಯೇ?
| ಕುಮಾರ್ ಕೋಲಾರ
ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ, ದಿನಾಂಕ 1.4.2017ರ ಮೇರೆಗೆ ಒಂದೇ ಹುದ್ದೆಯಲ್ಲಿ 30 ವರ್ಷ ಯಾವ ಪದೋನ್ನತಿ ಇಲ್ಲದೆ ಸೇವೆ ಸಲ್ಲಿಸಿದರೆ ನಿಮಗೆ 30 ವರ್ಷದ ಒಂದು ವಾರ್ಷಿಕ ವೇತನ ಬಡ್ತಿಯು ಲಭ್ಯವಾಗುತ್ತದೆ. ಆದರೆ, ನಿಮ್ಮ ವೇತನ ಶ್ರೇಣಿಯಲ್ಲಿ ಸ್ಥಗಿತ ವೇತನ ಪಡೆಯುತ್ತಿರುವುದರಿಂದ ನಿಮಗೆ ಒಂದು ಸ್ಥಗಿತ ವೇತನ ಬಡ್ತಿ ಲಭ್ಯವಾಗುತ್ತದೆ. ಆ ಕಾರಣಕ್ಕೆ ಈ ಆದೇಶದ ಮೇರೆಗೆ ನೀವು 30 ವರ್ಷದ ವೇತನ ಬಡ್ತಿಯನ್ನು ಪಡೆಯಲು ಮನವಿ ಸಲ್ಲಿಸಬಹುದು.