ನ್ಯೂಸ್

ಸರ್ಕಾರಿ ಕಾರ್ನರ್: ಪಿಂಚಣಿ, ಉಪದಾನ ಎಷ್ಟಿರಲಿದೆ?

Webdesk - Ravikanth
ದಿನದ ಪ್ರಶ್ನೆ

ಪ್ರಾಥಮಿಕ ಶಾಲಾ ಶಿಕ್ಷಕನಾದ ನನ್ನ ಹಾಲಿ ಮೂಲವೇತನ 48,900 ರೂ. ಆಗಿದ್ದು, ನಿವೃತ್ತಿ ವೇಳೆಗೆ ಒಟ್ಟು ಸೇವಾವಧಿ 27 ವರ್ಷ 5 ತಿಂಗಳು ಆಗಿರುತ್ತದೆ. ನನಗೆ ದೊರಕುವ ಪಿಂಚಣಿ ಮತ್ತು ನಿವೃತ್ತಿ ಉಪದಾನವೆಷ್ಟು?

| ಬಿ.ಎಸ್. ಗಾಯಕ್​ವಾಡ್ ವಿಜಯಪುರ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಪ್ರಕಾರ ನಿಮ್ಮ ಸೇವಾವಧಿ 27 ವರ್ಷ 5 ತಿಂಗಳು ಅಥವಾ 55 ವರ್ಷಕ್ಕೆ ಅರ್ಧ ವರ್ಷಗಳಾಗಿರುತ್ತವೆ. ಇದರ ಆಧಾರದ ಮೇಲೆ ನಿಮ್ಮ ಪಿಂಚಣಿ 22,412 ರೂ. ನಿವೃತ್ತಿ ಉಪದಾನ 6,72,375 ರೂ. ಆಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.