ನ್ಯೂಸ್

ಪತ್ನಿ ವೇತನದಲ್ಲಿ ಅರ್ಧ ಪಾಲು ಸಿಗುವುದೇ?

Webdesk - Ravikanth

ನನ್ನ ಪತ್ನಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ನಮಗೆ ವಿವಾಹವಾಗಿ 15 ವರ್ಷಗಳಾಗಿವೆ. ನಮಗೆ ಮಕ್ಕಳಾಗಿಲ್ಲ. ನಾನು ನಿರುದ್ಯೋಗಿ ಎಂಬ ಕಾರಣಕ್ಕೆ ಆಕೆ ನನ್ನನ್ನು ಮನೆಯಿಂದ ಹೊರ ಹಾಕಿದ್ದು, ವಿಚ್ಛೇದನ ನೀಡಿರುವುದಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ನಾನು, ಪತ್ನಿಯ ಅರ್ಧ ವೇತನ ಪಡೆಯಲು ಅವಕಾಶವಿದೆಯೇ? ಆಕೆ ವರ್ತನೆ ಬಗ್ಗೆ ದೂರು ನೀಡಬಹುದೇ?

| ಪ್ರಕಾಶ್ ಮೈಸೂರು

ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 2021ರ ಪ್ರಕಾರ ಯಾರೇ ಸರ್ಕಾರಿ ನೌಕರನು/ಳು ಅವನ/ಳ ಪತ್ನಿ/ಪತಿಯ ಮತ್ತು ಮಕ್ಕಳ ಆಹಾರ, ಬಟ್ಟೆ, ವಸತಿ ಮತ್ತು ಶಿಕ್ಷಣ ಮುಂತಾದ ಮೂಲಭೂತ ಅವಶ್ಯಕತೆ ಬಗ್ಗೆ ಕಾಳಜಿ ವಹಿಸಲು ನಿರ್ಲಕ್ಷಿಸ ತಕ್ಕದ್ದಲ್ಲ ಎಂದು ಸೂಚಿಸಿದೆ. ನಿಮ್ಮ ಪತ್ನಿ ಈ ನಿಯಮವನ್ನು ಉಲ್ಲಂಘಿಸಿದರೆ, ಶಿಸ್ತು ಕ್ರಮಕ್ಕೆ ಒಳಗಾಗುತ್ತಾರೆ. ಆದ್ದರಿಂದ ನೀವು ಆರ್ಥಿಕ ಮತ್ತು ಕೌಟುಂಬಿಕ ಪರಿಹಾರ ಪಡೆಯಲು ಸಂಬಂಧಿತ ಸಕ್ಷಮ ಪ್ರಾಧಿಕಾರಿಗೆ ಲಿಖಿತ ದೂರು ನೀಡಬಹುದು. ಹೆಚ್ಚಿನ ವಿವರಗಳಿಗೆ ಎಂ.ಉಮೇಶ್ ಅವರ ‘ನಡತೆ ನಿಯಮಗಳು, ಸಮಗ್ರ ಕೈಪಿಡಿ’ ಕೃತಿ ನೋಡಬಹುದು.