ನ್ಯೂಸ್

ಸರ್ಕಾರಿ ಕಾರ್ನರ್: ಪಿಡಿಒಗಳಿಗಿಲ್ಲ ಶಾಲಾ ಭೇಟಿ ಅಧಿಕಾರ

Webdesk - Ravikanth

ದಿನದ ಪ್ರಶ್ನೆ 

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಮೇಲುಸಹಿ ಮಾಡುವ, ಹಾಜರಿರದ ಶಿಕ್ಷಕರಿಗೆ ಗಿ ಚಿಹ್ನೆ ಹಾಕುವ ಅಧಿಕಾರವಿದೆಯೇ?

| ಕೃಪಾನಂದ ಮಂಡ್ಯ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಾಲೆಗೆ ಭೇಟಿ ನೀಡುವ ಅಧಿಕಾರ ಹೊಂದಿರುವುದಿಲ್ಲ. ಅಲ್ಲದೆ, ಅವರು ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಮೇಲುಸಹಿ ಮಾಡುವ ಮತ್ತು ಹಾಜರಿರದ ಶಿಕ್ಷಕರಿಗೆ ಗಿ ಚಿಹ್ನೆ ಹಾಕುವ ಅಧಿಕಾರ ಹೊಂದಿರುವುದಿಲ್ಲ. ನಿಮ್ಮ ಪಿಡಿಒ ವ್ಯಾಪ್ತಿ ಮೀರಿ ಕರ್ತವ್ಯ ನಿರ್ವಹಿಸಿರುವುದರಿಂದ ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು ಕ್ಷೇತ್ರ ಶಿಕ್ಷಣಾಧಿಕಾರಿಗೆ ವರದಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.