ನ್ಯೂಸ್

ಸರ್ಕಾರಿ ಕಾರ್ನರ್: ಬೇರೊಂದು ಹುದ್ದೆ ನೇಮಕಾತಿಗೆ ನಿಯಮ

Webdesk - Ravikanth
ದಿನದ ಪ್ರಶ್ನೆ

ನನ್ನ ಪತ್ನಿಯು ವಿಶ್ವವಿದ್ಯಾನಿಲಯವೊಂದರಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ 3 ವರ್ಷ ಕೆಲಸ ಮಾಡಿದ್ದಾರೆ. ಪರೀಕ್ಷಾರ್ಥ ಅವಧಿಯೊಳಗೆ ತತ್ಸಮಾನ ಹುದ್ದೆಗೆ ಅರ್ಜಿ ಸಲ್ಲಿಸಬಾರದು ಎಂಬ ಷರತ್ತಿನೊಡನೆ ನೇಮಕವಾಗಿದ್ದು, ಅವರು ಬೇರೊಂದು ಇಲಾಖೆಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆದರೆ, ವಿಶ್ವವಿದ್ಯಾನಿಲಯವು ಆಕ್ಷೇಪಣಾ ರಹಿತ ಪ್ರಮಾಣಪತ್ರ ನೀಡದೆ ಇರುವುದರಿಂದ ಅವರು ಈ ಹುದ್ದೆಯಲ್ಲಿ ಮುಂದುವರಿಯಲು ಇಷ್ಟವಿಲ್ಲ. ಹಾಗಾಗಿ ಹೊರ ಹುದ್ದೆಯಲ್ಲಿ ನೇಮಕಗೊಳ್ಳಲು ಇಚ್ಛಿಸುವುದರಿಂದ ಈ ಹಂತದಲ್ಲಿ ನಿಯಮಾವಳಿ ರೀತ್ಯ ಯಾವ ಕ್ರಮ ಕೈಗೊಳ್ಳಬೇಕು?

| ಗಣೇಶ್ ಭಟ್ ಮಂಗಳೂರು

ನಿಮ್ಮ ಪತ್ನಿಯು ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಹುದ್ದೆಗೆ ರಾಜೀನಾಮೆ ನೀಡಿ ಹೊಸ ಹುದ್ದೆಗೆ ಸೇರಬೇಕಾಗುತ್ತದೆ. ಆದರೆ, 1977ರ ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ ನಿಯಮ 11ರ ರೀತ್ಯ ಆಯ್ಕೆಯಾದರೆ ನೇಮಕಾತಿ ಪ್ರಾಧಿಕಾರದ ಆಕ್ಷೇಪಣಾ ರಹಿತ ಪ್ರಮಾಣಪತ್ರ ಪಡೆದೇ ಹೊಸ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ನಿಮ್ಮ ಪತ್ನಿಯು ರಾಜೀನಾಮೆ ಸಲ್ಲಿಸಿ ಹೊಸ ಹುದ್ದೆಗೆ ಹಾಜರಾದರೆ ಅವರ ಹಿಂದಿನ ಸೇವೆಯನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.