ನ್ಯೂಸ್

ಲಿಂಗ ಬದಲಿಸಿಕೊಂಡ ಟೀಮ್ ಇಂಡಿಯಾದ ಸ್ಟಾರ್​ ಕ್ರಿಕೆಟಿಗನ ಪುತ್ರ! ಇನ್ಮುಂದೆ ನನ್ನ ಹೆಸರು ಆರ್ಯನ್ ಅಲ್ಲ..ಅನಯಾ..cricketer

ನವದೆಹಲಿ: ( cricketer ) ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರ ಹಿರಿಯ ಮಗ ಆರ್ಯನ್, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಹುಡುಗಿಯಾಗಿ ರೂಪಾಂತರಗೊಂಡಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗುತ್ತಿದೆ.

ಸಂಜಯ್ ಬಂಗಾರ್ ಟೀಮ್ ಇಂಡಿಯಾ ಪರ 12 ಟೆಸ್ಟ್, 15 ಏಕದಿನ ಪಂದ್ಯಗಳನ್ನಾಡಿದ್ದಾರೆ. ಹಾಗೆಯೇ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಆರ್​ಸಿಬಿ ಸೇರಿದಂತೆ ಒಂದಷ್ಟು ತಂಡಗಳ ಮುಖ್ಯ ಕೋಚ್ ಹುದ್ದೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಸಂಜಯ್ ಬಂಗಾರ್ ಅವರ ಹಿರಿಯ ಮಗ ಆರ್ಯನ್ ಕಳೆದ 10 ತಿಂಗಳಿಂದ ಹಾರ್ಮೋನ್ ಬದಲಾವಣೆಗಾಗಿ ಚಿಕಿತ್ಸೆ ಪಡೆದಿದ್ದಾರೆ. ಇದೀಗ 10 ತಿಂಗಳ ಶಸ್ತ್ರಚಿಕಿತ್ಸೆಯ ನಂತರ ಹುಡುಗಿಯಾಗಿ ರೂಪಾಂತರಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಇದಕ್ಕಾಗಿ ನನ್ನ ಕ್ರಿಕೆಟ್ ಕೆರಿಯರ್ ಅನ್ನು ತ್ಯಾಗ ಮಾಡುತ್ತಿದ್ದೇನೆ. ಇನ್ಮುಂದೆ ನನ್ನ ಹೆಸರು ಆರ್ಯನ್ ಅಲ್ಲ, ಬದಲಾಗಿ ಅನಯಾ ಎಂದಿದ್ದಾರೆ.

ಆರ್ಯನ್ ಬಂಗಾರ್ ಕೂಡ ತಂದೆಯಂತೆ ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿದ್ದರು. ಅದರಂತೆ ಬಾಲ್ಯದಿಂದಲೇ ಕ್ರಿಕೆಟ್ ಅಭ್ಯಾಸವನ್ನು ಸಹ ಶುರು ಮಾಡಿದ್ದರು. ಎಡಗೈ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಆರ್ಯನ್ ಲೀಸೆಸ್ಟರ್‌ಶೈರ್‌ನ ಹಿಂಕ್ಲೆ ಕ್ರಿಕೆಟ್ ಕ್ಲಬ್‌ ಪರ ಆಡಿದ್ದಾರೆ. ಸದ್ಯ ಅನಯಾ ಬಂಗಾರ್ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ.