ಬೆಂಗಳೂರು: ನಟಿ ಸಂಜನಾ ಗಲ್ರಾನಿ ಅಲಿಯಾಸ್ ಮಹಿರಾ ಇತ್ತೀಚೆಗೆ ತಮ್ಮ ಪತಿ ಹಾಗೂ ಮಗನೊಂದಿಗೆ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಮೆಕ್ಕಾ ಹಾಗೂ ಮದೀನಾಗೆ ಭೇಟಿ ನೀಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸಂಜನಾ ಗಲ್ರಾನಿ ಮೆಕ್ಕಾ ಮದೀನಾ ಭೇಟಿಯ ವಿಡಿಯೋವನ್ನು ಅವರ ಯೂಟ್ಯೂಬ್ ಚಾನೆಲ್ ಮೂಲಕವಾಗಿ ಹಂಚಿಕೊಂಡಿದ್ದಾರೆ. ಜೊತೆಗೆ ಅಲ್ಲಿನ ರೀತಿ ರಿವಾಜುಗಳನ್ನು ಕೂಡಾ ವಿವರಿಸಿದ್ದಾರೆ.
ಮೇ 19 ರಂದು ಮಗ ಅಲಾರಿಕ್ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಂಜನಾ ಗಲ್ರಾನಿ ಪವಿತ್ರ ಯಾತ್ರಾಸ್ಥಳ ಮೆಕ್ಕಾದಲ್ಲಿ ಆಚರಿಸಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. ಅಭಿಮಾನಿಗಳು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಸಂಜನಾ ಗಲ್ರಾನಿ ಬೆಂಗಳೂರು ಮೂಲದ ವೈದ್ಯ ಅಜೀಜ್ ಪಾಷಾ ಅವರನ್ನು ಮದುವೆ ಆದ ನಂತರ 2018ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ಮಹಿರಾ ಎಂದು ಬದಲಿಸಿಕೊಂಡಿದ್ದಾರೆ. ಸಿನಿಮಾದಿಂದ ದೂರ ಉಳಿದಿರುವ ನಟಿ ಮಗು ಮತ್ತು ಕುಟುಂಬ ಎಂದು ಸಮಯ ಕಳೆಯುತ್ತಿದ್ದಾರೆ.