ಹರೀಶ್ ರಾಯ್​ 
ನ್ಯೂಸ್

'ಓಂ', 'ಕೆಜಿಎಫ್​' ಖ್ಯಾತಿಯ ಖಳನಟ ಹರೀಶ್ ರಾಯ್ ಇನ್ನಿಲ್ಲ!

ಬೆಂಗಳೂರು: ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್​ ರಾಯ್ (Harish Roy) ಇಂದು (ನ.06) ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕನ್ನಡ ಸಿನಿಮಾಗಳಾದ ‘ಓಂ’, ‘ಕೆಜಿಎಫ್’​, ‘ಮೆಜೆಸ್ಟಿಕ್’,​ ‘ಜೋಡಿಹಕ್ಕಿ’ ಸೇರಿ ಹಲವಾರು ಸೂಪರ್​ಹಿಟ್​ ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿದ್ದ ಹರೀಶ್​, ಕೆಲವು ತಿಂಗಳುಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ತೀವ್ರ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಥೈರಾಯ್ಡ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಹರೀಶ್​ ರಾಯ್​, ಕೆಲವು ತಿಂಗಳುಗಳ ಹಿಂದಷ್ಟೆ ಸ್ಯಾಂಡಲ್​ವುಡ್​ ನಟರ ಬಳಿ ಸಹಾಯಹಸ್ತ ಕೇಳಿದ್ದರು. ಅವರ ಮನವಿಗೆ ಸ್ಟಾರ್​ ಕಲಾವಿದರು ಸ್ಪಂದಿಸಿ, ಚಿಕಿತ್ಸೆಗೆ ಹಣ ನೀಡಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.
ಕನ್ನಡ, ತಮಿಳು ಸೇರಿ ಇತರೆ ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿದ್ದ ಹರೀಶ್​ ರಾಯ್​ ಇನ್ನಿಲ್ಲ ಎಂಬ ಸುದ್ದಿ ತಿಳಿದ ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹರೀಶ್​ ಅಗಲಿದ್ದಾರೆ.