Prabhas Spirit: ತೆಲುಗು ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ರಭಾಸ್ ಅಭಿನಯಿಸುತ್ತಿರುವ ‘ಸ್ಪಿರಿಟ್’ ಚಿತ್ರದಿಂದ ನಟಿ ದೀಪಿಕಾ ಪಡುಕೋಣೆ ಹೊರನಡೆದಿದ್ದೇ ತಡ ಇದೀಗ ಅವರ ಸ್ಥಾನಕ್ಕೆ ಬಾಲಿವುಡ್ ಬೆಡಗಿ ತ್ರಿಪ್ತಿ ದಿಮ್ರಿ ಆಯ್ಕೆಯಾಗಿದ್ದಾರೆ. ಬಿಗ್ ಪ್ರಾಜೆಕ್ಟ್ನಿಂದ ಸ್ಟಾರ್ ನಟಿ ಹೊರನಡೆಯುತ್ತಿದ್ದಂತೆ ಅವರ ಸ್ಥಾನಕ್ಕೆ ಮತ್ತೊಬ್ಬ ಸ್ಟಾರ್ ಹೀರೋಯಿನ್ ಬರಲಿದ್ದಾರೆ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬಂದಿತ್ತು. ಆದ್ರೆ, ಸಿನಿಪ್ರಿಯರ ನಿರೀಕ್ಷೆಗಳೆಲ್ಲವೂ ಸದ್ಯ ತಲೆಕಳೆಗಾಗಿದೆ.
ಇದನ್ನೂ ಓದಿ: ಭಾರತ ಸಶಸ್ತ್ರ ಪಡೆ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ; ಆಪರೇಷನ್ ಸಿಂಧೂರ್ ಇದನ್ನು ಸಾಬೀತುಪಡಿಸಿದೆ; ಅಮಿತ್ ಶಾ| amit-shah
ದುಬಾರಿ ಮೊತ್ತದ ಸಂಭಾವನೆ, ದಿನಕ್ಕೆ 6 ಗಂಟೆಗಳ ಚಿತ್ರೀಕರಣ ಸಮಯ ಮತ್ತು ಚಿತ್ರ ತೆರೆಕಂಡ ಬಳಿಕ ಲಾಭದ ಪಾಲು ಕೇಳಿದ ಹಿನ್ನೆಲೆ ದೀಪಿಕಾರನ್ನು ಚಿತ್ರದಿಂದ ತೆಗೆದುಹಾಕಲು ಸಂದೀಪ್ ಕಠಿಣ ನಿರ್ಧಾರ ಕೈಗೊಂಡರು. ದೀಪಿಕಾ ಎಕ್ಸಿಟ್ ಆದ ಬೆನ್ನಲ್ಲೇ ನಿರ್ದೇಶಕರಿಗೆ ಪ್ರಭಾಸ್ ಎದುರು ಅಭಿನಯಿಸುವ ನಾಯಕಿ ಸ್ಥಾನಕ್ಕೆ ಯಾರನ್ನು ಕರೆತರಬೇಕು ಎಂಬ ಗೊಂದಲ ಶುರುವಾಗಿತ್ತು. ಈ ವಿಚಾರ ಸಿನಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಬಾಲಿವುಡ್ ನಟಿ ಶ್ರದ್ಧಾ ಕಪೂರ್, ತೆಲುಗು ನಟಿ ಮೃಣಾಲ್ ಠಾಕೂರ್ ಮತ್ತು ಕನ್ನಡದ ಬೆಡಗಿ ರುಕ್ಮಿಣಿ ವಸಂತ್ ಹೆಸರು ಮುನ್ನೆಲೆಗೆ ಬಂದಿತು. ಬಹುಬೇಡಿಕೆ ನಟಿಯರ ಹೆಸರನ್ನು ಬದಿಗಿಟ್ಟ ಸಂದೀಪ್, ತಮ್ಮದೇ ನಿರ್ಧಾರ ಮೂಲಕ ಕಡೆಗೂ ನಿರ್ಮಾಪಕರ ಜೇಬು ಗಟ್ಟಿ ಮಾಡಿದ್ದಾರೆ.
ಸ್ಟಾರ್ ನಟಿಮಣಿಯರ ಸಾಲಿನಲ್ಲಿ ಇಲ್ಲದ ಯುವನಟಿ ತ್ರಿಪ್ತಿ ದಿಮ್ರಿಗೆ ಬಹುನಿರೀಕ್ಷಿತ ಸ್ಪಿರಿಟ್ನಲ್ಲಿ ಸಂದೀಪ್ ಅವಕಾಶ ಕೊಟ್ಟಿರುವುದು ಸದ್ಯ ಹಲವರ ಹುಬ್ಬೇರಿಸಿದೆ. ಈ ಕುರಿತು ಜಾಲತಾಣಗಳಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೊರಹಾಕಿದ್ದಾರೆ. ಪ್ರಭಾಸ್ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ತ್ರಿಪ್ತಿ ಆಯ್ಕೆ ಹಲವರಿಗೆ ತೃಪ್ತಿ ತಂದಿಲ್ಲ. ಆದರೆ, ಇಲ್ಲಿ ಸಂದೀಪ್ ರೆಡ್ಡಿ, ಟಾಪ್ ನಟಿಯರನ್ನು ಆಯ್ಕೆ ಮಾಡಿದರೆ, ಹಲವು ಷರತ್ತು ಮತ್ತು ಬೇಡಿಕೆಗಳನ್ನು ಮುಂದಿಡುತ್ತಾರೆ. ಇವರ ಬದಲಿಗೆ ಯುವನಟಿಗೆ ಅವಕಾಶ ಕೊಟ್ಟರೆ, ಚಿತ್ರದ ಬಜೆಟ್ ಗಾತ್ರ ಹಾಗೂ ಷರತ್ತುಗಳ ರಿಸ್ಕ್ ಕೂಡ ಕಡಿಮೆಯಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಈ ನಿರ್ಧಾರ ಕೈಗೊಂಡಿರುವುದು ಸ್ಪಷ್ಟ.
ಇದನ್ನೂ ಓದಿ: ರಾಜ್ಯದಲ್ಲಿ Covid 19 ಏರಿಕೆ ಪ್ರಕರಣ; ಕರೊನಾ ಎದುರಿಸಲು ಅಗತ್ಯಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ: CM ಸಿದ್ದರಾಮಯ್ಯ ಸೂಚನೆ
ಪ್ರಭಾಸ್ ಸ್ಪಿರಿಟ್ ಚಿತ್ರದಲ್ಲಿ ನಟಿಸಲು ಬರೋಬ್ಬರಿ 20 ಕೋಟಿ ರೂ. ಸಂಭಾವನೆ ಡಿಮಾಂಡ್ ಇಟ್ಟಿದ್ದ ದೀಪಿಕಾ ಪಡುಕೋಣೆ, ಹಲವು ಷರತ್ತುಗಳನ್ನು ಮುಂದಿಟ್ಟಿದ್ದರು. ಸ್ಟಾರ್ ನಟಿಯ ನಡೆಯಿಂದ ಬೇಸರಗೊಂಡಿದ್ದ ಸಂದೀಪ್, ಕೇವಲ 4 ಕೋಟಿ ರೂ.ಗೆ ಅವರ ಸ್ಥಾನಕ್ಕೆ ತ್ರಿಪ್ತಿಯನ್ನು ಕರೆತಂದಿರುವುದು ಸದ್ಯ ನಿರ್ಮಾಪಕರಿಗೆ ಒಳಿತನ್ನೇ ಮಾಡಿದೆ. ಈ ವಿಷಯ ಬಾಲಿವುಡ್ ಮತ್ತು ಟಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ,(ಏಜೆನ್ಸೀಸ್).