ನ್ಯೂಸ್

ಮಾಯೆ ಆ್ಯಂಡ್ ಕಂಪನಿಗೆ ಸೆನ್ಸಾರ್; ಸಂದೀಪ್ ನಿರ್ದೇಶನದ ಸೋಷಿಯಲ್ ಕ್ರೈಮ್ ಡ್ರಾಮಾ

ಬೆಂಗಳೂರು: ಯುವ ನಿರ್ದೇಶಕ ಸಂದೀಪ್ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿರುವ ಸೋಷಿಯಲ್, ಕ್ರೈಮ್ ಡ್ರಾಮಾ ‘ಮಾಯೆ ಆ್ಯಂಡ್ ಕಂಪನಿ’. ಸದ್ದಿಲ್ಲದೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಇತ್ತೀಚೆಗಷ್ಟೆ ಸೆನ್ಸಾರ್ ಆಗಿದ್ದು, ‘ಯು/ಎ’ ಸರ್ಟಿಫಿಕೇಟ್ ನೀಡಲಾಗಿದೆ.

ದೂರದರ್ಶನದಲ್ಲಿ ವಿಡಿಯೋ ಎಡಿಟರ್ ಆಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿ ನಿವೃತ್ತರಾಗಿರುವ ಎಂ.ಎನ್.ರವೀಂದ್ರ ರಾವ್ ಈ ಚಿತ್ರ ನಿರ್ಮಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಲಿರಿಕಲ್ ವಿಡಿಯೋ ಹಾಗೂ ಟ್ರೇಲರ್ ಬಿಡುಗಡೆ ಮಾಡುವ ಆಲೋಚನೆ ಸಂದೀಪ್ ಅವರದು. ಸೆನ್ಸಾರ್ ಬಳಿಕ ಪ್ರಚಾರದತ್ತ ಮುಖ ಮಾಡಿರುವ ಚಿತ್ರತಂಡ, ಸದ್ಯ ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ‘ಮಾಯೆ ಆ್ಯಂಡ್ ಕಂಪನಿ’ಯಲ್ಲಿ ಅರ್ಜುನ್ ಕಿಶೋರ್ ಚಂದ್ರ, ನವೀನ್, ಯಶಸ್ವಿನಿ, ಅನುಷಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ತುರಹಳ್ಳಿ ಕಾಡು, ಉತ್ತರಹಳ್ಳಿ ಸೇರಿ ಬೆಂಗಳೂರು ಹಾಗೂ ಕನಕಪುರ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಡಾ. ಎಚ್.ಎಸ್. ವೆಂಕಟೇಶ್ ಮೂರ್ತಿ ಸಂಗೀತ, ಸಾಹಿತ್ಯವಿದೆ.