ನಟಿಯರೆಂದರೆ ನಟನೆ ಬಗ್ಗೆ ಮಾತ್ರ ಆಸಕ್ತಿ ಹೊಂದಿರುತ್ತಾರೆ ಎಂಬುದು ಕೆಲವರ ಅಭಿಪ್ರಾಯ. ನಟನೆ ಹೊರತಾಗಿ ಅವರ ಆಸಕ್ತಿ ಕ್ಷೇತ್ರಗಳು ಸಾಕಷ್ಟು ಇರುತ್ತವೆ. ಅಂತಹದರಲ್ಲಿ ಕೆಲವು ಅಡುಗೆ, ನೃತ್ಯ, ಯೋಗ, ತಂತ್ರಜ್ಞಾನ ಇತ್ಯಾದಿ. ಇವುಗಳ ನಡುವೆ ಸಾಕಷ್ಟು ನಟ-ನಟಿಯರಿಗೆ ಗಾರ್ಡನಿಂಗ್ ಬಗ್ಗೆ ವಿಶೇಷ ಆಸಕ್ತಿ, ಕಾಳಜಿ, ಒಲವು ಇರುತ್ತದೆ. ಶೂಟಿಂಗ್ ಇಲ್ಲದ ವೇಳೆ ಮನೆಯಲ್ಲಿ ಗಾರ್ಡನಿಂಗ್ ಕೆಲಸ ಮಾಡುವ ನಟಿಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
| ಕೆ.ಬಿ. ಶುಭ ಬೆಂಗಳೂರು ಗಾರ್ಡನ್ ಬೇಕೇ ಬೇಕು ಸುಲಭವಾಗಿ ಬೆಳೆಯಬಹುದು
ಶಿವಮೊಗ್ಗದ ಹುಡುಗಿ ಶ್ವೇತಾ ಪ್ರಸಾದ್, ಬಾಲ್ಯದಿಂದಲೂ ತೋಟ, ಗಿಡಗಳ ನಡುವೆ ಬೆಳೆದವರು. ಹಾಗಾಗಿ ಕೈ ತೋಟದ ಬಗ್ಗೆ ತಮಗೆ ವಿಶೇಷ ಆಸಕ್ತಿ ಎನ್ನುತ್ತಾರೆ ಅವರು. ‘ಕಾಲೇಜು ದಿನಗಳಲ್ಲಿ ಪಿಜಿಯಲ್ಲಿ ನೆಟ್ಟ ಗಿಡಗಳು ಇಂದಿಗೂ ಗಂಡನ ಮನೆಯಲ್ಲಿ ಇವೆ. ಮದುವೆಗೆ ಮುನ್ನ ಗಾರ್ಡನ್ ಬೇಕು ಎನ್ನುವುದೇ ಮೊದಲ ಕಂಡೀಷನ್ ಆಗಿತ್ತು. ಅವು ನನಗೆ ಮಕ್ಕಳು ಇದ್ದ ಹಾಗೆ. ನನ್ನ ಗಾರ್ಡನ್ ಪ್ರೇಮ ಕಂಡು ಸಾಕಷ್ಟು ಜನ ಸ್ಪೂರ್ತಿ ಪಡೆದು ಅವರ ಮನೆಯಲ್ಲೂ ಗಿಡಗಳನ್ನು ನೆಟ್ಟಿದ್ದಾರೆ. ಇನ್ನು ಕೆಲವರು ಕೆಲ ಗಿಡದ ಪಾಟ್ ತಂದು ನಮ್ಮ ಮನೆಯಲ್ಲಿ ಜಾಗ ಇಲ್ಲ, ನಿಮ್ಮ ಮನೆಯಲ್ಲಿ ನನ್ನ ಹೆಸರಲ್ಲಿ ಬೆಳೆಯಿರಿ ಅಂತ ಹೇಳಿದ್ದೂ ಇದೆ’ ಎನ್ನುತ್ತಾರೆ ಶ್ವೇತಾ.
ಮನೆಗೆ ಬೇಕಾದ ಸೊಪು್ಪ, ತರಕಾರಿಗಳನ್ನು ಬೆಳೆಯುವ ಶ್ವೇತಾ, ಗಾರ್ಡನ್ಗೆ ಇದುವರೆಗೂ ಯಾವುದೇ ರೀತಿಯ ರಾಸಾಯನಿಕ ಗೊಬ್ಬರವನ್ನು ಹಾಕಿಲ್ಲವಂತೆ. ಮನೆಯಲ್ಲೇ ತರಕಾರಿ ವೇಸ್ಟೇಜ್ನಿಂದ ಗೊಬ್ಬರ ತಯಾರಿಸಿ 2 ತಿಂಗಳಿಗೊಮ್ಮೆ ಅದನ್ನು ಹಾಕುತ್ತಾರಂತೆ. ನಿತ್ಯ ಕನಿಷ್ಟ ಒಂದು ಗಂಟೆ ಗಾರ್ಡನ್ನಲ್ಲಿ ಕಾಲ ಕಳೆಯುತ್ತಾರೆ ಶ್ವೇತಾ.
ಗಾರ್ಡನ್ನಲ್ಲಿ ಅಡಗಿದೆ ಕಲಿಕೆ
ಆಸೆ ಈಡೇರಿಸಿಕೊಂಡೆ
ಹಬ್ಬ-ಹರಿದಿನಕ್ಕೆ ಬೇಕಾದ ಹಣ್ಣು, ಹೂವನ್ನು ಮನೆಯಲ್ಲೇ ಬೆಳೆಯಬೇಕು ಎಂಬ ಆಸೆ ಶ್ವೇತಾಗೆ ಇತ್ತಂತೆ. ಅದಕ್ಕೆ ಸರಿಯಾಗುವ ರೀತಿ ಮನೆಯಲ್ಲೇ ತೋಟ ಮಾಡಿಕೊಂಡು, ಅಲ್ಲಿ ಹಲವು ವಿಧದ ಹಣ್ಣು ಮತ್ತು ಹೂವಿನ ಗಿಡಗಳನ್ನು ಬೆಳೆಸಿದ್ದಾರಂತೆ. ಜತೆಗೆ ಪಾಲಾಕ್, ನವಿಲುಕೋಸು, ಎಲೆಕೋಸು, ಟ್ಯೊಮ್ಯಾಟೊ, ಕೊತ್ತಂಬರಿ, ನಿಂಬು ಇನ್ನಿತರ ಗಿಡಗಳನ್ನು ಬೆಳೆಸಿದ್ದಾಗಿ ಅವರು ಹೇಳಿದ್ದಾರೆ.
ಟೆರೆಸ್ ಗಾರ್ಡನಿಂಗ್ ಮಾಡಿದ್ದೇನೆ
ಅಜ್ಜಿ ತಯಾರಿಸುತ್ತಿದ್ದ ಹೇರ್ ಆಯಿಲ್
ಅಮ್ಮ, ಅಜ್ಜಿ ತಲೆಗೆ ಹಚ್ಚಲು ಬಳಸುತ್ತಿದ್ದ ಎಣ್ಣೆ ಸದಾ ಘಮಗುಡುತ್ತಿತ್ತು. ಇದರ ಬಗ್ಗೆ ಅಜ್ಜಿಗೆ ಕೇಳಿದಾಗ ಅದನ್ನು ಮಾಡುವ ವಿಧಾನ ಹೇಳಿದರು. ಇಂದಿಗೂ ನಾನು ಅದೇ ಹೇರ್ ಆಯಿಲ್ ಬಳಸುತ್ತೇನೆ. ಇದರ ಬಗ್ಗೆ ಕೆಲವರು ಕೇಳಿದರು. ಅವರಿಗೂ ಆ ರೀತಿಯ ಎಣ್ಣೆ ಮಾಡಿಕೊಟ್ಟೆ. ಅದು ಎಲ್ಲರಿಗೂ ಇಷ್ಟವಾಯಿತು. ಹಾಗಾಗಿ ಹೇರ್ ಆಯಿಲ್ ಜತೆ ಕೆಲ ಹರ್ಬಲ್ ಫೇಸ್ ಫ್ಯಾಕ್ಗಳನ್ನು ಮಾಡುತ್ತೇನೆ. ಇದಕ್ಕೆ ಬೇಕಾದ ಗಿಡ, ಬೇರು ಇತರ ವಸ್ತುಗಳ ಬಗ್ಗೆ ಅಧ್ಯಯನ ಮಾಡುತ್ತಿರುತ್ತೇನೆ.