ಕಿಚ್ಚ ಸುದೀಪ್​ 
ನ್ಯೂಸ್

50ನೇ ವಸಂತಕ್ಕೆ ಕಾಲಿಡುತ್ತಿರುವ ಕಿಚ್ಚ ಸುದೀಪ್; ಪತಿ​​ಗೆ ಸರ್​​ಪ್ರೈಸ್​​ ಕೊಡಲಿದ್ದಾರೆ ಪ್ರಿಯಾ

ಬೆಂಗಳೂರು: ನಾಳೆ ಸ್ಯಾಂಡಲ್​ವುಡ್​​ ನಟ ಕಿಚ್ಚ ಸುದೀಪ್ ಅವರಿಗೆ​ ಹುಟ್ಟುಹಬ್ಬದ ಸಂಭ್ರಮ. ಈ ಹೊತ್ತಿನಲ್ಲಿ ಟ್ವೀಟರ್​ ಮೂಲಕ ಅವರ ಪತ್ನಿ ವಿಶೇಷ ಮಾಹಿತಿ ಶೇರ್​ ಮಾಡಿಕೊಂಡು ಅಚ್ಚರಿಯೊಂದು ಕಾದಿರುವುದಾಗಿ ಹೇಳಿದ್ದಾರೆ.

ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಫ್ಯಾನ್ಸ್ ಜೊತೆ ಕಿಚ್ಚನ ಹುಟ್ಟುಹಬ್ಬ ನಡೆಯಲಿದೆ. ಹೀಗಿರುವಾಗ ಸುದೀಪ್ ಬರ್ತ್‌ಡೇಗೆ ಪತ್ನಿ ಸರ್​ಪ್ರೈಸ್​​ ಗಿಫ್ಟ್ ಕೊಡುವ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದಾರೆ.

ನಿಮ್ಮ ಪ್ರೀತಿಯ ಕಿಚ್ಚ ಸುದೀಪರ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಲು ಕಾತುರದಿಂದ ಕಾಯುತ್ತಿದ್ದೇನೆ. ಇಂದಿನ ಕಾರ್ಯಕ್ರಮದಲ್ಲಿ ನನ್ನ ಕಡೆಯಿಂದ ನಿಮ್ಮೆಲ್ಲರ ಪರವಾಗಿ ಕಿಚ್ಚನಿಗೆ ಒಂದು ವಿಶೇಷವಾದ ಅದ್ದೂರಿ ಅಚ್ಚರಿ ಕಾದಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಚ್ಚರಿಯನ್ನು ಆನಂದಿಸಿ, ಕಿಚ್ಚನನ್ನು ಹರಸಿ ಎಂದು ಪ್ರಿಯಾ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.

ಜನ್ಮದಿನದ ಹೊಸ್ತಿಲಿನಲ್ಲಿ ‘ಅರಸು ಕ್ರಿಯೇಷನ್ಸ್​’ ಸಂಸ್ಥೆ ಕಡೆಯಿಂದ ಒಂದು ವಿಶೇಷವಾದ ಉಡುಗೊರೆ ನೀಡಲಾಗಿದೆ. ಆಕಾಶದಲ್ಲಿನ ಒಂದು ನಕ್ಷತ್ರಕ್ಕೆ ಕಿಚ್ಚ ಸುದೀಪ ಎಂದು ಹೆಸರು ಇಡಲಾಗಿದೆ. ಈ ಮೂಲಕ ಸುದೀಪ್​ಗೆ ವಿಶೇಷವಾದ ಗೌರವ ಸಲ್ಲಿಸಲಾಗಿದೆ. ಇದರ ನಡುವೆಯೇ, ಇದೀಗ ಸುದೀಪ್​ ಅವರ ಪತ್ನಿ ಪ್ರಿಯಾ ಸುದೀಪ್​ ಅವರು ಕುತೂಹಲದ ವಿಷಯವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.

ಸುದೀಪ್​  ಅವರ ‘ವಿಕ್ರಾಂತ್​ ರೋಣ’ ಬ್ಲಾಕ್​ಬಸ್ಟರ್​ ಸಿನಿಮಾ ಆಗಿ ಹೊರಹೊಮ್ಮಿತು. ಇದೀಗ  ಟೈಟಲ್​ ರಿವೀಲ್​ ಆಗದ ಸಿನಿಮಾ ಒಂದರಲ್ಲಿ ಬಿಜಿಯಾಗಿದ್ದಾರೆ ಸುದೀಪ್​. ಇದು ಅವರ  46ನೇ ಸಿನಿಮಾ ಆಗಿದೆ.  ಸದ್ಯಕ್ಕೆ ಇದನ್ನು Kichcha 46 ಎಂದು ಕರೆಯಲಾಗುತ್ತಿದೆ.