ನ್ಯೂಸ್

'ಶೋಯೆಬ್ ಮಲಿಕ್' ಜೊತೆಗಿನ ವಿಚ್ಛೇದನ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ 'ಸನಾ ಜಾವೇದ್'| Sana Javed

Sana Javed: ಪಾಕಿಸ್ತಾನದ ಖ್ಯಾತ ದಂಪತಿ ಸನಾ ಜಾವೇದ್ ಮತ್ತು ಶೋಯೆಬ್ ಮಲಿಕ್ ಅವರ ವೈವಾಹಿಕ ಜೀವನದಲ್ಲಿ ಗೊಂದಲ ಉಂಟಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗದ್ದಲ ಉಂಟು ಮಾಡಿತ್ತು.

ವೈವಾಹಿಕ ಜೀವನದಿಂದ ಅವರು ಬೇರ್ಪಡುವ ಹಂತದಲ್ಲಿದ್ದಾರೆ ಎಂಬ ವರದಿಗಳು ಕೇಳಿ ಬಂದ ಬೆನ್ನೆಲ್ಲೇ ಸನಾ ಜಾವೇದ್ ಸರಳವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಇನ್​ಸ್ಟಾಗ್ರಾಮ್​ನಲ್ಲಿ ಪತಿ ಶೊಯಬ್ ಮಲಿಕ್‌ ಅಮೆರಿಕಾ ಪ್ರವಾಸದ ಸಂದರ್ಭದಲ್ಲಿ ತೆಗೆದ ಹೃದಯಸ್ಪರ್ಶಿ ಹಾಗೂ ಪ್ರೇಮಪೂರ್ಣ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ. ಇದರ ಮೂಲಕ ತಮ್ಮ ವಿವಾಹ ಜೀವನದಲ್ಲಿ ಯಾವುದೇ ತೊಂದರೆ ಇಲ್ಲ ಎಂಬುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಈ ದಂಪತಿ ಅಮೆರಿಕಾದಲ್ಲಿ ತಮ್ಮ ರಜೆಯನ್ನು ಆನಂದಿಸುತ್ತಿದ್ದು, ಲಾಸ್ ಏಂಜಲೀಸ್ ಯೂನಿವರ್ಸಲ್ ಸಿಟಿ ಹಾಗೂ ಸಾಂಟಾ ಮೋನಿಕಾ ಸೇರಿದಂತೆ ಹಲವು ಸುಂದರ ಸ್ಥಳಗಳಲ್ಲಿ ಸಂಚಾರ ಮಾಡಿದ್ದಾರೆ. ವಿಶ್ವಪ್ರಶಿದ್ಧ ಯೂನಿವರ್ಸಲ್ ಸ್ಟುಡಿಯೋಸ್ ಹಾಲಿವುಡ್​ಗೆ ಭೇಟಿ ನೀಡಿ, ನಂತರ ಜನಪ್ರಿಯ ಕಡಲ ತೀರವಾದ ಸಾಂಟಾ ಮೋನಿಕಾದಲ್ಲಿ ವಿಶ್ರಾಂತಿ ಪಡೆದಿದ್ದಾರೆ.

(ಏಜೆನ್ಸೀಸ್)

ವದಂತಿಗಳು ಒಂದು ಚಿಕ್ಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಪ್ರಾರಂಭವಾಗಿತ್ತು. ಆ ವಿಡಿಯೋದಲ್ಲಿ ಅವರು ಇಬ್ಬರು ಒಟ್ಟಿಗೆ ಕೂತಿದ್ದರೂ ಪರಸ್ಪರ ಮಾತನಾಡದೆ ಇರವ ದೃಶ್ಯ ಕಂಡು ಬಂದಿತ್ತು. ಇದರಿಂದ ಅಭಿಮಾನಿಗಳು ಅವರ ನಡುವೆ ಅಸಮಾಧಾನ ಉಂಟಾಗಿದೆ ಎಂದು ಊಹಿಸಿದ್ದರು. ಆದರೆ, ಸನಾ ಇತ್ತೀಚಿಗೆ ಹಂಚಿಕೊಂಡ ಪ್ರೀತಿಯಿಂದ ತುಂಬಿದ ಚಿತ್ರಗಳು ಮತ್ತು ಸಂತೋಷದ ಕ್ಷಣಗಳು ಎಲ್ಲಾ ವದಂತಿಗಳಿಗೆ ತೆರೆ ಬಿದ್ದಂತಾಗಿದೆ.