Sambhal Violence: 2024ರಲ್ಲಿ ನಡೆದ ಸಂಭಾಲ್ ಹಿಂಸಾಚಾರದ ಕುರಿತು ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ದೇವೇಂದ್ರ ಕುಮಾರ್ ಅರೋರಾ ನೇತೃತ್ವದ 3 ಸದಸ್ಯರ ನ್ಯಾಯಾಂಗ ಆಯೋಗವು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಗುರುವಾರ (ಆಗಸ್ಟ್,28) ತನ್ನ ವರದಿಯನ್ನು ಸಲ್ಲಿಸಿದೆ.
ಈ ಸಂಶೋಧನೆಗಳ ಪ್ರಕಾರ, ಸ್ವಾತಂತ್ರ್ಯದ ಸಮಯದಲ್ಲಿ ಸಂಭಾಲ್‌ನಲ್ಲಿ ಹಿಂದೂ ಜನಸಂಖ್ಯೆಯು ಶೇ.45 ರಿಂದ ಶೇ.20ಕ್ಕೆ ಕುಸಿದಿದೆ. ಅಲ್ಲದೆ, ದಶಕಗಳ ಕೋಮು ಸಂಘರ್ಷಗಳು ಮತ್ತು ರಾಜಕೀಯ ಓಲೈಕೆಗಳಿಂದ ಸಂಭಾಲ್ ಜಿಲ್ಲೆಯ ಜನಸಂಖ್ಯಾ ಗಮನಾರ್ಹವಾಗಿ ಬದಲಾಯಿಸಿದೆ.
1. ಸಂಭಾಲ್‌ನಲ್ಲಿ ಹಿಂದೂ ಜನಸಂಖ್ಯೆ ಕೇವಲ ಶೇ.20 ರಷ್ಟಿದೆ.
2. ಸ್ವಾತಂತ್ರ್ಯದ ನಂತರ, ಸಂಭಾಲ್ 15 ಕೋಮು ಗಲಭೆಗಳು ನಡೆದಿವೆ.
3. ಸಂಭಾಲ್ ಹಲವಾರು ಭಯೋತ್ಪಾದಕ ಸಂಘಟನೆಗಳ ಕೇಂದ್ರವಾಗಿದೆ.
4. ಮೌಲಾನಾ ಸನಾವುಲ್ ಹಕ್ ಜಾಗತಿಕ ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿದೆ.
5. ಸಂಭಾಲ್‌ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯ ಗ್ಯಾಂಗ್‌ಗಳು ಸಕ್ರಿಯವಾಗಿವೆ.
ಗಲಭೆಯ ಸಮಯದಲ್ಲಿ ಹಿಂದೂಗಳನ್ನು ಕೊಲ್ಲಲು ಪೂರ್ವಯೋಜಿತ ಯೋಜನೆ ಇತ್ತು ಎಂಬ ಭಯಾನಕ ವಿವರವನ್ನು ವರದಿ ಬಹಿರಂಗಪಡಿದೆ. ಹಿಂಸಾಚಾರವನ್ನು ಹೆಚ್ಚಿಸಲು ಹೊರಗಿನಿಂದ ಗಲಭೆಕೋರರನ್ನು ಕರೆಸಲಾಗಿತ್ತು ಎಂದು ಆರೋಪಿಸಲಾಗಿದೆ. ಅಲ್ಲದೆ, ಹಿಂದೂ ಪ್ರಾಬಲ್ಯದ ನೆರೆಹೊರೆಗಳಲ್ಲಿ ಪೊಲೀಸರ ಉಪಸ್ಥಿತಿಯು ದೊಡ್ಡ ಪ್ರಮಾಣದ ಹತ್ಯೆಗಳನ್ನು ತಡೆಗಟ್ಟಿದೆ. ಆಂತರಿಕ ಪೈಪೋಟಿಯಿಂದಾಗಿ ತುರ್ಕಿ ಪಠಾಣರು ಮತ್ತು ಮತಾಂತರಗೊಂಡ ಹಿಂದೂ ಪಠಾಣರ ನಡುವೆ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿತು. ಇದರ ಪರಿಣಾಮವಾಗಿ ಗುಂಡಿನ ದಾಳಿಯಲ್ಲಿ ನಾಲ್ಕು ಸಾವುಗಳು ಸಂಭವಿಸಿದವು ಎಂದು ವರದಿಯಲ್ಲಿ ಹೇಳಲಾಗಿದೆ.
2024ರ ನವೆಂಬರ್ 22 ರಂದು ಸಂಸದ ಜಿಯಾ-ಉರ್-ರೆಹಮಾನ್ ಬರ್ಕ್ ಮಾಡಿದ ಭಾಷಣವು ಹಿಂಸಾಚಾರಕ್ಕೆ ಅಡಿಪಾಯ ಹಾಕಿತು ಎಂದು ತನಿಖೆಯು ಬಹಿರಂಗಪಡಿಸಿದೆ. ಭಕ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ, ನಾವು ಈ ದೇಶದ ಮಾಲೀಕರು, ಗುಲಾಮರಲ್ಲ. ಇಲ್ಲಿ ಒಂದು ಮಸೀದಿ ಇತ್ತು. ಇಲ್ಲಿ ಒಂದು ಮಸೀದಿ ಇದೆ. ಇದು ಕೊನೆಯವರೆಗೂ ಇರುತ್ತದೆ. ನಾವು ಇಲ್ಲಿ ಮತ್ತೊಂದು ಅಯೋಧ್ಯೆ ಯಾಗಲೂ ಬಿಡುವುದಿಲ್ಲ ಎಂದು ಹೇಳಿದ್ದರು. ಭಾಷಣ ಮಾಡಿದ ಎರಡು ದಿನಗಳ ನಂತರ, ತುರ್ಕಿ ಮತ್ತು ಪಠಾಣ್ ಸಮುದಾಯಗಳಿಗೆ ಸೇರಿದ 24 ಗುಂಪುಗಳ ನಡುವೆ ಘರ್ಷಣೆಗಳು ಭುಗಿಲೆದ್ದವು ಎಂದು ತಿಳಿಸಿದೆ.
ವರದಿಯ ಪ್ರಕಾರ ಈ ಪಿತೂರಿ ಸ್ವಯಂಪ್ರೇರಿತವಲ್ಲ ಬದಲಾಗಿ ಉತ್ತಮವಾಗಿ ರೂಪಿಸಲ್ಪಟ್ಟಿತ್ತು ಎಂದು ಹೇಳುತ್ತದೆ. ಸಂಸದ ಜಿಯಾ-ಉರ್-ರೆಹಮಾನ್ ಬಾರ್ಕ್, ಶಾಸಕರ ಮಗ ಸುಹೈಲ್ ಇಕ್ಬಾಲ್ ಮತ್ತು ಇಂಟಿಜಾಮಿಯಾ ಸಮಿತಿಯ ಪ್ರಮುಖ ಸದಸ್ಯರು ಹಿಂಸಾಚಾರವನ್ನು ಯೋಜಿಸುವಲ್ಲಿ ಪ್ರಮುಖ ವ್ಯಕ್ತಿಗಳಾಗಿ ಗುರುತಿಸಲ್ಪಟ್ಟಿದ್ದಾರೆ ತಿಳಿದು ಬಂದಿದೆ.
2024ರ ನವೆಂಬರ್ 24ರಂದು ನಡೆದ ಸಂಭಾಲ್ ಹಿಂಸಾಚಾರವು ಉತ್ತರ ಪ್ರದೇಶದಲ್ಲಿ ನಡೆದ ಅತ್ಯಂತ ಆತಂಕಕಾರಿ ಕೋಮು ಗಲಭೆಗಳಲ್ಲಿ ಒಂದಾಗಿದೆ. ಸ್ಥಳೀಯ ಸಂಸದ ಜಿಯಾ-ಉರ್-ರೆಹಮಾನ್ ಬಾರ್ಕ್ ಪ್ರಚೋದನಕಾರಿ ಭಾಷಣದ ನಂತರ ಪ್ರಾರಂಭವಾದ ಉದ್ವಿಗ್ನತೆ ತ್ವರಿತವಾಗಿ ತುರ್ಕಿ ಮತ್ತು ಪಠಾಣ್ ಸಮುದಾಯಗಳ ನಡುವೆ ಪೂರ್ಣ ಪ್ರಮಾಣದ ಸಂಘರ್ಷಕ್ಕೆ ಕಾರಣವಾಯಿತು. ಈ ಹಿಂಸಾಚಾರವು 4 ಮಂದಿ ಮೃತಪಟ್ಟಿದ್ದರು.ಅಲ್ಲದೆ, ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಸಂಘಟಿತ ಗುಂಪುಗಳು ಅಶಾಂತಿ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದವು. (ಏಜೆನ್ಸೀಸ್)