ನ್ಯೂಸ್

ಮದುವೆ ಗೌನ್​ ಹರಿದು ಹೊಸ ರೂಪ ಕೊಟ್ಟ ಸಮಂತಾ; ಬಿಳಿ ಬಟ್ಟೆ ಕಪ್ಪು ಆಗಿರೋದ್ರ ಹಿಂದೆ ಏನಾದ್ರೂ ಹೊಸ ಪ್ಲ್ಯಾನ್ ಇದ್ಯಾ ಎಂದ್ರು ಪ್ಯಾನ್ಸ್

ಮುಂಬೈ: ದಕ್ಷಿಣ ಸಿನಿಮಾ ಇಂಡಸ್ಟ್ರಿಯ ದ ಮೋಸ್ಟ್​ ಕ್ಯೂಟೆಸ್ಟ್​ ಕಪಲ್ಸ್​ ಎಂದೇ ಖ್ಯಾತಿ ಪಡೆದಿದ್ದ ಸಮಂತಾ ಹಾಗೂ ನಾಗಚೈತನ್ಯ ದಂಪತಿ ವಿಚ್ಛೇದನ ಪಡೆದು ಮೂರು ವರ್ಷಗಳಾಗುತ್ತ ಬಂದರೂ ಈಗಲೂ ಇವರಿಬ್ಬರು ದೂರಾಗಿರುವ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದು, ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಟಿ ಸಮಂತಾ ನಟನೆಯಿಂದ ಗ್ಯಾಪ್​ ತೆಗೆದುಕೊಂಡಿದ್ದು, ಬಹಳ ದಿನಗಳಿಂದ ಅವರ ನಟನೆಯ ಚಿತ್ರ, ವೆಬ್​ ಸೀರೀಸ್​ ಯಾವುದು ತೆರೆಕಂಡಿಲ್ಲ. ಸಿನಿಮಾಗಳ ಹೊರತಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಮಾಜಿ ಪತಿಯ ಮೇಲೆ ಸಮಂತಾ ಕೋಪಿಸಿಕೊಂಡಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ನಟ ನಾಗಚೈತನ್ಯ ನಟಿ ಶೋಭಿತಾ ಜೊತೆ ತಿರುಗಾಡುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್​ ಅಂಗಳದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದಕ್ಕೆ ಪೂರಕವಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಗಿಂದಾಗೆ ಫೋಟೋ ಹಾಗೂ ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿರುತ್ತವೆ. ಈ ವಿಚಾರ ಸಮಂತಾ ಕಣ್ಣು ಕೆಂಪಗಾಗಿಸಿತ್ತು ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸುದ್ದಿಯೋಂದು ಹೊರಬಿದ್ದಿದ್ದು, ಮದುವೆಗೆ ಸಮಂತಾ ಧರಿಸಿದ್ದ ಗೌನ್​ಅನ್ನು ಹರಿದುಹಾಕಿದ್ದಾರೆ ಎಂಬ ವಿಚಾರ ಕೇಳಿ ಬರುತ್ತಿದೆ.

ಸಮಂತಾ ಏಪ್ರಿಲ್​ 25ರಂದು ನಡೆದ ಗ್ಲಾಮರಸ್​ ಫ್ಯಾಶನ್​ ಪ್ರೋಗ್ರಾಮ್​ನಲ್ಲಿ ಕಪ್ಪು ಬಣ್ಣದ ಗೌನ್​ ಧರಿಸಿ ಆಕರ್ಷಕವಾಗಿ ಕಾಣಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಇದರ ಬಗ್ಗೆ ಮಾಹಿತಿ ನೀಡಿದ ನಟಿ ಸಮಂತಾ ತಮ್ಮ ಮದುವೆ ಸಮಾರಂಭದಲ್ಲಿ ಧರಿಸಲಾಗಿದ್ದ ಗೌನ್​ ಎಂದು ತಿಳಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.

ಸುಂದರವಾಗಿದ್ದ ಆಕರ್ಷಕ ವೈಟ್ ವೆಡ್ಡಿಂಗ್ ಗೌನ್ ಅನ್ನು ಹರಿದು ಹಾಕಿದ ನಟಿ ಅದಕ್ಕೆ ಬ್ಲ್ಯಾಕ್ ಡೈ ಡಿಸೈನ್ ಮಾಡಿಸಿಕೊಂಡು ಆಫ್ ಶೋಲ್ಡರ್ ಮಾಡಿಸಿ ಧರಿಸಿದ್ದಾರೆ. ಈ ಒಂದು ಸ್ಪೆಷಲ್ ಗೌನ್ ಸಖತ್ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಮಾಜಿ ಪತಿ ಮೇಲೆ ಯಾಕಿಷ್ಟು ಕೋಪ ಎಂದು ಕಮೆಂಟ್​ ಮಾಡಿದ್ದಾರೆ.

ಫೋಟೋವನ್ನು ಹಂಚಿಕೊಂಡಿರುವ ನಟಿ ನಾವು ಇನ್ನು ಮುಂದೆ ಸುಸ್ಥಿರತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅದು ಆಯ್ಕೆಯಾಗಿರುವ ಹಂತವನ್ನು ನಾವು ದಾಟಿದ್ದೇವೆ. ನಾನು ಇಂದು ಧರಿಸಿರುವ ಉಡುಗೆ ಪ್ರೀತಿಯ ಗೌನ್ ಆಗಿದ್ದು, ಈ ಇವೆಂಟ್​ಗಾಗಿ ಇದನ್ನು ಮರುರೂಪಿಸಲಾಗಿದೆ ಎಂದು ಅಡಿಬರಹವನ್ನು ನೀಡಿದ್ದಾರೆ.