ನ್ಯೂಸ್

ನಟಿ ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ!

ಆಂಧ್ರಪ್ರದೇಶ: ನಟಿಯರಿಗೆ ಅವರದೇ ಆದ ದೇವಸ್ಥಾನಗಳು ನಿರ್ಮಿಸುವ ಈ ಸಂಸ್ಕೃತಿ ತಮಿಳುನಾಡಿನಲ್ಲಿ ಜನಪ್ರಿಯವಾಗಿದೆ. ಖುಷ್ಬೂ, ನಿಧಿ ಅಗರ್ವಾಲ್ ಮತ್ತು ಹನ್ಸಿಕಾ ಅವರಿಗೆ ಈಗಾಗಲೇ ತಮಿಳುನಾಡಿನಲ್ಲಿ ದೇವಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಇದೀಗ ಆಂಧ್ರಪ್ರದೇಶದಲ್ಲಿ ಈ ಸಂಸ್ಕೃತಿ ಶುರುವಾಗಿದ್ದು, ಸ್ಟಾರ್ ನಟಿ ಸಮಂತಾ ಅವರ ಕಟ್ಟಾ ಅಭಿಮಾನಿಯೊಬ್ಬರು ತಮ್ಮದೇ ಆದ ದೇವಸ್ಥಾನವನ್ನು ನಿರ್ಮಿಸುತ್ತಿದ್ದಾರೆ.

ಬಾಪಟ್ಲ ನಿವಾಸಿ ಸಂದೀಪ್ ಸಮಂತಾ ಅವರ ಕಟ್ಟಾ ಅಭಿಮಾನಿ. ಬಾಪಟ್ಲಾ ಜಿಲ್ಲೆಯ ಆಲಪಾಡು ಮೂಲದ ಸಂದೀಪ್ ಎಂಬ ವ್ಯಕ್ತಿ ತನ್ನ ಮನೆಯ ಅವರಣದಲ್ಲೇ ಸಮಂತಾಗೆ ದೇವಸ್ಥಾನ ನಿರ್ಮಿಸಿದ್ದಾರೆ. ಸಮಂತಾ ಹುಟ್ಟುಹಬ್ಬದ ವೇಳೆ ಈ ದೇವಾಲಯವನ್ನು ತೆರೆಯಲು ಅಭಿಮಾನಿ ಪ್ಲಾನ್ ಮಾಡಿದ್ದಾನೆ.

ಸಮಂತಾ ಅವರಿಗೆ ಕಾಡುತ್ತಿರುವ ಅನಾರೋಗ್ಯದ ಸ್ಥಿತಿಯ ಬಗ್ಗೆ ಕೇಳಿದ ನಂತರ ಈ ಅಭಿಮಾನಿ ತಿರುಪತಿ, ಚೆನ್ನೈ ಮತ್ತು ನಾಗಪಟ್ಟಣಕ್ಕೆ ತೀರ್ಥಯಾತ್ರೆಗೆ ಹೋದರು, ಸಮಂತಾ ಅವರ ಮೇಲಿನ ಅಭಿಮಾನವು ಒಂದು ಮಟ್ಟಕ್ಕೆ ಏರಿದೆ. ಇದೀಗ ಹೊಸ ಬೆಳವಣಿಗೆಯೊಂದರಲ್ಲಿ ಸಂದೀಪ್ ಬಾಪಟ್ಲದಲ್ಲಿರುವ ತಮ್ಮ ಮನೆಯಲ್ಲಿ ಸಮಂತಾಗೆ ದೇವಸ್ಥಾನ ನಿರ್ಮಿಸಿದ್ದಾರೆ. ದೇವಸ್ಥಾನ ನಿರ್ಮಾಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಸಮಂತಾ ವಿಗ್ರಹವನ್ನು ಸಹ ಸಿದ್ಧಪಡಿಸಿದ್ದಾರೆ.

ಸ್ಯಾಮ್ ಅವರ ಹುಟ್ಟುಹಬ್ಬದ ಸಂದರ್ಭವನ್ನು ಗುರುತಿಸಿ ಏಪ್ರಿಲ್ 28 ರಂದು ಈ ಸಮಂತಾ ದೇವಸ್ಥಾನವನ್ನು ತೆರೆಯಲು ಸಂದೀಪ್ ಯೋಜಿಸಿದ್ದಾರೆ. ಸಮಂತಾ ಚೇತರಿಸಿಕೊಂಡರೆ ಸ್ಯಾಮ್‌ಗಾಗಿ ದೇವಾಲಯವನ್ನು ನಿರ್ಮಿಸುತ್ತೆನೆಂದು ಹರಕೆ ಮಾಡಿಕೊಂಡಿದ್ದನಂತೆ. ಅದರಂತೆ ಈಗ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ.