ನ್ಯೂಸ್

ಉಫ್…ಸಮಂತಾ ಲೇಟೆಸ್ಟ್ ಲುಕ್ ನೋಡಿ ಅಭಿಮಾನಿಗಳ ಹಾರ್ಟ್​ಬೀಟ್​ ಜಾಸ್ತಿ ಆಯ್ತು!

ಮುಂಬೈ: ಸಮಂತಾ ರುತ್ ಪ್ರಭು ಇತ್ತೀಚೆಗೆ ಸಿನಿಮಾದಿಂದ ಸ್ವಲ್ಪ ಬಿಡುವು ಮಾಡಿಕೊಂಡ ನಂತರ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ನಟಿ ತನ್ನ ವೈಯಕ್ತಿಕ ಮತ್ತು ಪ್ರೊಫೆಷನಲ್ ಲೈಫ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಅಪ್​​​ಡೇಟ್ಸ್ ಹಂಚಿಕೊಳ್ಳುತ್ತಲೇ ಇರುತ್ತಾರೆ. ಏತನ್ಮಧ್ಯೆ, ಸಮಂತಾ ತಮ್ಮ ಇನ್ಸ್ಟಾದಲ್ಲಿ ಕೆಲವು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ನೋಟದಿಂದ ಪಡ್ಡೆ ಹುಡುಗರ ಹೃದಯಕ್ಕೆ ನೇರವಾಗಿ ಲಗ್ಗೆಯಿಟ್ಟಿದ್ದಾರೆ. ನಟಿಯ ಈ ಲುಕ್ ನೋಡಿ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ.

ಸಮಂತಾ ಹಂಚಿಕೊಂಡಿರುವ ಇತ್ತೀಚಿನ ಫೋಟೋಗಳಲ್ಲಿ, ಅವರು ಕಂದು ಬಣ್ಣದ ಬಿಕಿನಿಯನ್ನು ಧರಿಸಿ ನೀರಿನಲ್ಲಿ ಪೋಸ್ ಕೊಡುತ್ತಿದ್ದಾರೆ. ಅವರ ಹಾಟ್ ಸ್ಟೈಲ್ ಅನ್ನು ಈ ಫೋಟೋಗಳಲ್ಲಿ ನೋಡಬಹುದು. ಸಮಂತಾ ಅವರು ಈ ಹಿಂದೆಯು ಇಂತಹ ಫೋಟೋಗಳಲ್ಲಿ ಕಾಣಿಸಿಕೊಂಡರೂ ಈ ಲುಕ್ ನೋಡಿದ ನಂತರ ಅಭಿಮಾನಿಗಳು ಸ್ಟನ್ ಆಗಿದ್ದಾರೆ. ಅವರ ಫೋಟೋಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಲೇ ಇದ್ದಾರೆ. ಸದ್ಯ ನಟಿಯ ಈ ಹಾಟ್ ಸ್ಟೈಲ್ ಅಂತರ್ಜಾಲದಲ್ಲಿ ಸಂಚಲನ ಮೂಡಿಸುತ್ತಿದೆ.

ಸಮಂತಾ ಅನಾರೋಗ್ಯದ ಹಿನ್ನೆಲೆಯಲ್ಲಿ ಸ್ವಲ್ಪ ಸಮಯದವರೆಗೆ ಬ್ರೇಕ್ ತೆಗೆದುಕೊಂಡಿದ್ದರು. ಆಟೋಇಮ್ಯೂನ್ ಮಯೋಸಿಟಿಸ್‌ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಸಮಂತಾ ಇದಕ್ಕಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ನಟಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಸುಮಾರು 7 ತಿಂಗಳ ಸುದೀರ್ಘ ವಿರಾಮದ ನಂತರ ಸಮಂತಾ ಮತ್ತೊಮ್ಮೆ ಸಿನಿ ಕ್ಷೇತ್ರಕ್ಕೆ ಪುನರಾಗಮನ ಮಾಡಿದ್ದಾರೆ.

ಸಮಂತಾ ಕೊನೆಯದಾಗಿ ಕಾಣಿಸಿಕೊಂಡಿದ್ದು ರೊಮ್ಯಾಂಟಿಕ್ ಸಿನಿಮಾ 'ಖುಷಿ'ಯಲ್ಲಿ. ಇದರಲ್ಲಿ ವಿಜಯ್ ದೇವರಕೊಂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮುಂಬರುವ ಸಿನಿಮಾ 'ಸಿಟಾಡೆಲ್'ನಲ್ಲಿ ವರುಣ್ ಧವನ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಸಮಂತಾ. ಇದನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದಾರೆ. ಸಮಂತಾ ಅವರ ಈ ವೆಬ್ ಸರಣಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಇದರ ಬಿಡುಗಡೆ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.