ನ್ಯೂಸ್

ವಿಚ್ಛೇದನವು ನನ್ನ ವೈಯಕ್ತಿಕ ವಿಚಾರ.. ನನ್ನನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ: ಸಮಂತಾ samantha reaction

ಹೈದ್ರಾಬಾದ್​: ಟಾಲಿವುಡ್ ನಟ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಕೆಟಿಆರ್ ( Ktr ) ಕಾರಣ ( Samantha Breakup Reason ) ಎಂದು ತೆಲಂಗಾಣ ಸಚಿವೆ ಕೊಂಟ ಸುರೇಖಾ ಆರೋಪ ಮಾಡಿದ್ದಾರೆ.  ಸಚಿವೆ ಕೊಂಡಾ ಸುರೇಖಾ ಅವರ ಈ ಮಾತುಗಳು ತೆಲಂಗಾಣ ರಾಜಕೀಯದ ಜತೆಗೆ ಚಿತ್ರರಂಗವನ್ನೇ ಅಲ್ಲಾಡಿಸುತ್ತಿವೆ.

ಸಮಂತಾ ಬಗ್ಗೆ ಕೊಂಡ ಸುರೇಖಾ ಮಾಡಿರುವ ಸೆನ್ಸೇಷನಲ್ ಕಾಮೆಂಟ್‌ಗಳಿಗೆ ನಟಿ ಸಮಂತಾ ( samantha reaction ) ಕೌಂಟರ್ ನೀಡಿದ್ದಲ್ಲದೆ, ಟಾಲಿವುಡ್ ಸೆಲೆಬ್ರಿಟಿಗಳಾದ ಅಕ್ಕಿನೇನಿ ಕುಟುಂಬ, ಎನ್‌ಟಿಆರ್ ಮತ್ತು ನಾನಿ ಕೂಡ ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ವೈಯಕ್ತಿಕ ವಿಚಾರಗಳನ್ನು ರಾಜಕೀಯಕ್ಕೆ ತಂದಿದ್ದಕ್ಕೆ ಕೋಪಗೊಂಡಿದ್ದಾರೆ.  ಈ ಹೇಳಿಕೆಯನ್ನು ಉದ್ದೇಶಿಸಿ ಸಮಂತಾ  ಸೋಶಿಯಲ್​​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ನಾಗ ಚೈತನ್ಯ- ಸಮಂತಾ ಬೇರೆಯಾಗಲು Ktr ಕಾರಣ : ಸುರೇಖಾ ಆರೋಪ

ಬಾಪುಘಾಟ್‌ನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಟಾಲಿವುಡ್ ರಿಯಲ್ ಲೈಫ್ ಜೋಡಿ ನಾಗ ಚೈತನ್ಯ ಮತ್ತು ಸಮಂತಾ ತಮ್ಮ ವಿಚ್ಛೇದನಕ್ಕೆ ಕೆಟಿಆರ್ ಕಾರಣ ಎನ್ನಲಾಗುತ್ತಿದೆ ನಾನು ಇದನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ. ಕೆಟಿಆರ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಹಲವು ಸಿನಿಮಾ ನಾಯಕಿಯರ ಜೀವನದೊಂದಿಗೆ ಆಟವಾಡಿದ್ದಾರೆ, ನಾಯಕಿಯರ ಫೋನ್ ಕದ್ದಾಲಿಕೆ ಮಾಡಿ ನಾಯಕಿಯರನ್ನು ಡ್ರಗ್ಸ್ ಚಟಕ್ಕೆ ಸಿಲುಕಿಸಿ ಅವರ ಜೀವನವನ್ನೇ ನಾಶ ಮಾಡಿದ್ದಾರೆ. ನಾಯಕಿಯರು ಬೇಗ ಮದುವೆಯಾಗದೇ ಇರಲು ಕಾರಣ ಕೆಟಿಆರ್. ಕೆಟಿಆರ್ ನಾಯಕಿಯರ ಜೀವನ ಹಾಳು ಮಾಡಿದ್ದು ಟಾಲಿವುಡ್ ನ ಹಿರಿಯರೆಲ್ಲರಿಗೂ ಗೊತ್ತು ಎಂದು ಸಾಲುಸಾಲು ಆರೋಪ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

‘ಎನ್ ಕನ್ವೆನ್ಷನ್​ ಕಟ್ಟಡ ಒಡೆಯಬಾರದು ಎಂದರೆ ಸಮಂತಾಳನ್ನು ನನ್ನ ಬಳಿ ಕಳಿಸಿ ಎಂದು ನಾಗಾರ್ಜುನಗೆ ಕೆ.ಟಿ. ರಾಮ ರಾವ್ ಹೇಳಿದ್ದರು. ಕೆ.ಟಿ. ರಾಮ ರಾವ್ ಬಳಿ ಹೋಗು ಎಂದು ಸಮಂತಾಗೆ ನಾಗಾರ್ಜನ ಒತ್ತಾಯ ಮಾಡಿದರು. ಆದರೆ ಸಮಂತಾ ಒಪ್ಪಿಕೊಳ್ಳಲಿಲ್ಲ. ಒಪ್ಪದಿದ್ದರೆ ಮನೆ ಬಿಟ್ಟುಹೋಗು ಎಂದು ನಾಗಾರ್ಜುನ ಹೇಳಿದರು. ಅದಕ್ಕಾಗಿ ನಾಗ ಚೈತನ್ಯಗೆ ಸಮಂತಾ ಡಿವೋರ್ಸ್​ ನೀಡಿದರು’ ಎಂದು ಕೊಂಡ ಸುರೇಖಾ ಹೇಳಿದ್ದಾರೆ.

ಸಮಂತಾ ಟ್ವೀಟ್​​ನಲ್ಲಿ ಏನಿದೆ?:  

ಸುರೇಖಾ ಅವರ ಕಾಮೆಂಟ್‌ಗಳಿಗೆ ಸಮಂತಾ ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ. ಸುರೇಖಾ ಅವರೆ.. 'ಮಹಿಳೆಯರನ್ನು ವಸ್ತುಗಳಂತೆ ಕಾಣುವ ಈ ಗ್ಲಾಮರ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು, ಪ್ರೀತಿಯಲ್ಲಿ ಬೀಳಲು, ಎದ್ದು ನಿಲ್ಲಲು ಮತ್ತು ಹೋರಾಡಲು ಸಾಕಷ್ಟು ಶಕ್ತಿ ಬೇಕು. ನನ್ನ ಪ್ರಯಾಣವನ್ನು ಕಡಿಮೆ ಅಂದಾಜು ಮಾಡಬೇಡಿ. ವಿಚ್ಛೇದನವು ಸಂಪೂರ್ಣವಾಗಿ ನನ್ನ ವೈಯಕ್ತಿಕ ವಿಷಯವಾಗಿದೆ. ಇದು ಪರಸ್ಪರ ಒಪ್ಪಿಗೆಯೊಂದಿಗೆ ಮತ್ತು ಯಾವುದೇ ರಾಜಕೀಯ ಒಳಸಂಚು ಇಲ್ಲದೆ ಮಾಡಲಾಯಿತು. ದಯವಿಟ್ಟು ನನ್ನ ಹೆಸರನ್ನು ರಾಜಕೀಯದಿಂದ ದೂರವಿಡಿ,’’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಭಾವನೆಗಳಿಗೆ ಧಕ್ಕೆ ತರಬೇಡಿ ಎಂದು ಸಮಂತಾ ಟ್ವೀಟ್ ಮಾಡಿದ್ದಾರೆ.

ಸುರೇಖಾ ಈ ಕಾಮೆಂಟ್ ಮಾಡಿದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್-ಬಿಆರ್​ಎಸ್​​ ಮತ್ತು ಚೈತು ಮತ್ತು ಸ್ಯಾಮ್ ಅಭಿಮಾನಿಗಳ ನಡುವೆ ಭಾರೀ ಚರ್ಚೆ ನಡೆಯುತ್ತಿದೆ. ಸುರೇಖಾ ಅವರ ಈ ಕಾಮೆಂಟ್‌ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. BRS ಕೂಡ ಈ ಆರೋಪಗಳನ್ನು ಅಲ್ಲಗಳೆಯುತ್ತದೆ ಮತ್ತು ಸುರೇಖಾ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತದೆ.