Atlee Film: ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಕಂಡ 'ಜವಾನ್' ಚಿತ್ರವು, ನಿರ್ದೇಶಕ ಅಟ್ಲಿ ಕುಮಾರ್ಗೆ ಅಪಾರ ಯಶಸ್ಸು ಮತ್ತು ಬ್ಲಾಕ್ಬಸ್ಟರ್ ಹಿಟ್ ನಿರ್ದೇಶಕರು ಎಂಬ ಜನಪ್ರಿಯತೆಯನ್ನು ತಂದುಕೊಟ್ಟಿತು. ಈ ಚಿತ್ರದ ಬೆನ್ನಲ್ಲೇ ಹಲವು ದೊಡ್ಡ ದೊಡ್ಡ ಅವಕಾಶಗಳನ್ನು ಗಿಟ್ಟಿಸಿಕೊಂಡ ಅಟ್ಲಿ, ತಮ್ಮ ಮುಂದಿನ ಬಿಗ್ ಬಜೆಟ್ ಚಿತ್ರವನ್ನು ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಜತೆಗೆ ಮಾಡಲಿದ್ದೇನೆ ಎಂದು ಘೋಷಿಸಿದರು. ಈ ಚಿತ್ರಕ್ಕೆ ನಾಯಕಿಯಾಗಿ ಸಮಂತಾ ರುತು ಪ್ರಭು ಹೆಸರು ಮುನ್ನೆಲೆಗೆ ಬಂದಿರುವುದು ನಟಿಯ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ತೂಕ ಇಳಿಸಿ, ಫಿಟ್ ಆಗಿದ್ರು ಆಯ್ಕೆಯಿಂದ ಹೊರಗೆ! ಟೆಸ್ಟ್ ಸರಣಿಯಿಂದ ಸರ್ಫರಾಜ್ ಕೈಬಿಟ್ಟ ಬಗ್ಗೆ BCCI ಸ್ಪಷ್ಟನೆ
ವಿಜಯ್ ದೇವರಕೊಂಡ ಅಭಿನಯದ 'ಖುಷಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಆ ನಂತರದಲ್ಲಿ ವಿದೇಶ ಪ್ರವಾಸ ಕೈಗೊಂಡ ಸಮಂತಾ, ಯಾವುದೇ ಹೊಸ ಪ್ರಾಜೆಕ್ಟ್ಗಳಿಗೂ ಸಹಿ ಹಾಕಲಿಲ್ಲ. ಆದರೆ, ಈ ಮಧ್ಯೆ ಅಲ್ಲು ಅರ್ಜುನ್ ಮತ್ತು ಅಟ್ಲಿ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ 600 ಕೋಟಿ ರೂ. ಬಜೆಟ್ ಚಿತ್ರಕ್ಕೆ ಸಮಂತಾ ಸಹಿ ಹಾಕಿದ್ದಾರೆ ಎಂಬ ಸುದ್ದಿಗಳು ಸದ್ಯ ಟಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದೆಷ್ಟು ನಿಜ ಎಂಬುದು ಶೀಘ್ರವೇ ಅನಾವರಣಗೊಳ್ಳಬೇಕಿದೆ. ಇದರೊಟ್ಟಿಗೆ ಚಿತ್ರದಲ್ಲಿ ಸ್ಟಾರ್ಗಳ ಸಮಾಗಮ ಇರಲಿದೆ ಎಂದು ಹೇಳಲಾಗಿದೆ.
ಪ್ರಸ್ತುತ ಆರೋಗ್ಯ ಸಂಬಂಧಿತ ವಿಷಯಗಳಿಂದ ನಟನೆಯಿಂದ ದೂರ ಉಳಿದಿರುವ ಸಮಂತಾ, ಈ ಚಿತ್ರಕ್ಕೆ ಆಯ್ಕೆ ಆಗಿರುವುದು ಖಚಿತ ಎಂದಾದರೆ ಖಂಡಿತ ಇದು ನಟಿಯ ಅತ್ಯುತ್ತಮ ಕಮ್ಬ್ಯಾಕ್ ಆಗಲಿದೆ. ಸಿನಿ ಮೂಲಗಳ ಪ್ರಕಾರ, ಸಮಂತಾ ಜತೆಗೆ ನಿರ್ದೇಶಕರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಚಿತ್ರತಂಡ ಅಥವಾ ಸ್ವತಃ ಅಟ್ಲಿ ಹೇಳುವುದೇನು? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).