ನ್ಯೂಸ್

ನಾಗಚೈತನ್ಯ 2ನೇ ಮದ್ವೆ ಬೆನ್ನಲ್ಲೇ ಸಿನಿಮಾಗೆ ಬೈ ಬೈ ಹೇಳಿದ ಸಮಂತಾ! ಈ ನಿರ್ಧಾರ ನಿಜವೇ? ಎಂದ್ರು ಫ್ಯಾನ್ಸ್

ಬೆಂಗಳೂರು: ಸಮಂತಾ  ನಾಗ ಚೈತನ್ಯ ಅವರೊಂದಿಗಿನ ವಿಚ್ಛೇದನದ ನಂತರ,  ಒಂದು ವರ್ಷ ವಿರಾಮ ತೆಗೆದುಕೊಂಡು ಮೈಯೋಸಿಟಿಸ್‌ಗೆ ಚಿಕಿತ್ಸೆಯನ್ನೂ ತೆಗೆದುಕೊಳ್ಳುತ್ತಿದ್ದರು. ನಾಗಾ ಚೈತನ್ಯ ಅವರು ಶೋಭಿತಾ ಜತೆ ನಿಶ್ಚಿತಾರ್ಥವಾಗುತ್ತಿದ್ದಂತೆ  ಸಮಂತಾ ಹಾಟ್ ಟಾಪಿಕ್ ಆಗಿದ್ದಾರೆ.

ಇತ್ತೀಚೆಗಷ್ಟೇ ನಾಗ ಚೈತನ್ಯ ಶೋಭಿತಾ ಧೂಳಿಪಾಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ  ಸುದ್ದಿ ಬೆನ್ನಲ್ಲೇ ಸಮಂತಾಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದೆ. ಚೈತು ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯಿಸಲು ಸಮಂತಾ ಬಯಸುವುದಿಲ್ಲ. ಪ್ರತಿಕ್ರಿಯಿಸಲೂ ಇಲ್ಲ.. ಆಪ್ತ ಸ್ನೇಹಿತರಿಂದ ಬಂದಿರುವ ಮಾಹಿತಿ ಪ್ರಕಾರ ಆಕೆ ಸುಮ್ಮನಿದ್ದಾಳೆ.. ಈ ವಿಚಾರದಲ್ಲಿ ತನ್ನ ಮನಸ್ಸನ್ನು ಹಾಳು ಮಾಡಿಕೊಳ್ಳಬಾರದು ಎಂದುಕೊಂಡಿದ್ದಾಳೆ.

ಟಾಲಿವುಡ್ ನಿಂದ ದೂರ ಉಳಿದು ಮುಂಬೈ, ಚೆನ್ನೈನಲ್ಲಿ ಕೆಲ ವರ್ಷ ಕಳೆಯಲು ನಿರ್ಧರಿಸಿದ್ದಾರಂತೆ. ಈಗಲೂ ಅವಳು ಮುಂಬೈನಲ್ಲಿಯೇ ಇದ್ದಾಳೆ. ಹೆಚ್ಚಾಗಿ ಬಾಲಿವುಡ್ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಸಮಂತಾಗೆ ಅವಕಾಶಗಳಿಲ್ಲ. ಅವಳು ಸಿನಿಮಾಗೆ ಸಹಿ ಮಾಡಿಲ್ಲ ಎನ್ನಲಾಗಿದೆ.

ಬಾಲಿವುಡ್‌ನ ವೆಬ್ ಸೀರಿಸ್‌ಗಾಗಿ ಆಕೆಯನ್ನು ಹೆಚ್ಚಾಗಿ ಸಂಪರ್ಕಿಸಲಾಗುತ್ತಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ ಈ ವೆಬ್ ಶೂಟಿಂಗ್ ಗಾಗಿ ಸಮಂತಾ ಹೆಚ್ಚಿನ ಸಮಯವನ್ನು ಮುಂಬೈನಲ್ಲಿ ಕಳೆಯುತ್ತಿದ್ದಾರೆ. ಅಲ್ಲಿ ಆಕೆಗೆ ತನ್ನದೇ ಆದ ಪ್ಲಾಟ್ ಇದೆ ಎಂದು ವರದಿಯಾಗಿದೆ. ಸಮಂತಾ ಕೆಲಕಾಲ ಅಲ್ಲಿಯೇ ಇರಲಿದ್ದಾರೆ. ಟಾಲಿವುಡ್​​ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಹೀಗಾಗಿ ವೆಬ್​ ಸೀರಿಸ್​​ನಲ್ಲಿ ಬ್ಯುಸಿಯಾಗಿರುವ ಸಮಂತಾ ಸಿನಿಮಾಗಳಿಗೆ ಬಾಯ್​ ಬಾಯ್​ ಹೇಳುತ್ತಾರೆ ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ. ಎಷ್ಟರ ಮಟ್ಟಿಗೆ ಈ ಸುದ್ದಿ ನಿಜ ಎನ್ನುವುದು ಮಾತ್ರ ತಿಳಿದು ಬರಬೇಕಿದೆ.