ನ್ಯೂಸ್

ಸಲ್ಮಾನ್​ ಖಾನ್​ ಅಭಿಮಾನಿಗಳಿಗೆ ಶಾಖ್! ರಿಲೀಸ್ ದಿನವೇ ಲೀಕ್ ಆಯ್ತು ಸಿಕಂದರ್ HD ಸಿನಿಮಾ; Salman Khan

Salman Khan | ಬಾಲಿವುಡ್​ ನಟ ಸಲ್ಮಾನ್​ಖಾನ್​ ಅಭಿನಯದ ಅತಿ ದೊಡ್ಡ ಚಿತ್ರ 'ಸಿಕಂದರ್' ಬಾಕ್ಸ್ ಆಫೀಸ್‌ಗೆ ಲಗ್ಗೆ ಇಟ್ಟ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಇನ್ನೂ ನಿರ್ಮಾಪಕರು 600 ಸೈಟ್‌ಗಳಿಂದ ಚಿತ್ರವನ್ನು ತೆಗೆದುಹಾಕಲು ಕ್ರಮ ಕೈಗೊಂಡಿದ್ದಾರೆ.

ಸಲ್ಮಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರಕ್ಕೆ ಆರಂಭದಲ್ಲೇ ಅಡೆತಡೆ ಉಂಟಾಗಿ, ಮೊದಲ ದಿನವೇ ಪೈರಸಿ ಆಗಿದೆ. ಮತ್ತೊಂದೆಡೆ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಕೇಳಿ ಬರ್ತಿದೆ. ಇದನ್ನೆಲ್ಲಾ ನೋಡಿದರೆ ಸಿನಿಮಾದ ಬಾಕ್ಸ್ ಆಫೀಸ್​ ಕಲೆಕ್ಷನ್ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

ತಮಿಳು ರಾಕರ್ಸ್, ಮೂವೀರುಲ್ಜ್, ಫಿಲ್ಮಿಜಿಲ್ಲಾ ಸೇರಿದಂತೆ ವಿವಿಧ ಟೆಲಿಗ್ರಾಮ್‌ ಗುಂಪುಗಳು ಸಿಕಂದರ್ ಪೂರ್ತಿ ಸಿನಿಮಾವನ್ನು ಪ್ರಸಾರ ಮಾಡಿವೆ. ಸ್ಟ್ರೀಮಿಂಗ್ ಹಾಗೂ ಡೌನ್‌ಲೋಡ್‌ ಲಿಂಕ್‌ಗಳನ್ನು ಅಕ್ರಮವಾಗಿ ಹಂಚಿಕೊಳ್ಳಲಾಗಿದೆ. ಪೈರಸಿ ಮಾಡುವ ನೂರಾರು ವೆಬ್​ಸೈಟ್​ಗಳಲ್ಲಿ ಈ ಸಿನಿಮಾವನ್ನು ಅಪ್​ಲೋಡ್ ಮಾಡಲಾಗಿದೆ. ಹಾಗಾಗಿ ನಿರ್ಮಾಪಕ ಸಾಜಿದ್ ನಾಡಿದ್ವಾಲಾ ಅವರು ಕೂಡಲೇ ಎಚ್ಚೆತ್ತುಕೊಂಡಿದ್ದು, ತಮ್ಮ ತಂಡದ ಜೊತೆ ಸೇರಿ 600ಕ್ಕೂ ಹೆಚ್ಚು ಸೈಟ್​ಗಳಿಂದ ಪೈರಸಿ ಲಿಂಕ್​ಗಳನ್ನು ತೆಗೆದು ಹಾಕಿದ್ದಾರೆ ಎನ್ನಲಾಗಿದೆ.

ಈ ಪೈರಸಿ ಕಾಟದ ನಡುವೆ ಸಲ್ಮಾನ್ ಖಾನ್ ಅಭಿಮಾನಿಗಳು ಸಿಕಂದರ್ ಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಥಿಯೇಟರ್‌ಗೆ ಧಾವಿಸುತ್ತಿರುವ ಫ್ಯಾನ್ಸ್‌ ಬೆಳ್ಳಿತೆರೆ ಮೇಲೆ ಸಿಕಿಂದರ್‌ನ ಅಬ್ಬರ ಹಾಗೂ ಎ.ಆರ್‌. ಮುರುಗದಾಸ್‌ನ ಆ್ಯಕ್ಷನ್ ಥ್ರಿಲ್ಲರ್​ ದೃಶ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ.

ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಕಾಜಲ್ ಅಗರ್ವಾಲ್, ಸತ್ಯರಾಜ್, ಶರ್ಮಾನ್ ಜೋಶಿ, ಪ್ರತೀಕ್ ಬಬ್ಬರ್, ಅಂಜಿನಿ ಧವನ್ ಮತ್ತು ಜತಿನ್ ಸರ್ನಾ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಹಿಂದಿ ಬ್ಲಾಕ್‌ಬಸ್ಟರ್‌ ಸಿನಿಮಾಗಳಿಗೆ ಹೆಸರುವಾಸಿಯಾದ ಎಆರ್ ಮುರುಗದಾಸ್ ನಿರ್ದೇಶಿಸಿದ್ದಾರೆ. 2014ರ ಬ್ಲಾಕ್‌ಬಸ್ಟರ್ 'ಕಿಕ್' ನಂತರ ಸಲ್ಮಾನ್ ಅವರೊಂದಿಗೆ ಮತ್ತೆ ಒಂದಾಗುತ್ತಿರುವ ಸಾಜಿದ್ ನಾಡಿಯಾಡ್‌ವಾಲಾ ಚಿತ್ರವನ್ನು ನಿರ್ಮಿಸಿದ್ದಾರೆ.