ನ್ಯೂಸ್

ಅಸ್ವಸ್ಥಳಾದಾಗ ಸಲ್ಮಾನ್​ ಆರೈಕೆ ಮಾಡಿದರು! ಬಾಲಿವುಡ್​​ ಸುಲ್ತಾನನ್ನು ಹಾಡಿ ಹೊಗಳಿದ ರಶ್ಮಿಕಾ ಮಂದಣ್ಣ ​| Bollywood

ಮುಂಬೈ: ನಾನು ಸಿನಿಮಾ ಸೆಟ್​ನಲ್ಲಿ ಅಸ್ವತ್ಥಳಾಗಿದ್ದಾಗ ಬಾಲಿವುಡ್(Bollywood)​ ನಟ ಸಲ್ಮಾನ್​ ಖಾನ್ ನನ್ನನ್ನು ಚೆನ್ನಾಗಿ ನೋಡಿಕೊಂಡು ಆರೈಕೆ ಮಾಡಿದರು ಎಂದ ನಟಿ ರಶ್ಮಿಕಾ ಮಂದಣ್ಣ ಸಲ್ಮಾನ್​ ಅವರನ್ನು ಹಾಡಿ ಹೊಗಳಿದ್ದಾರೆ.

ಸಲ್ಮಾನ್​ ಅವರ ಮುಂಬರುವ ಚಿತ್ರ ಸಿಕಿಂದರ್​ ಸಿನಿಮಾದಲ್ಲಿ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಖಾಸಗಿ ಸುದ್ದಿವಾಹಿನಿ ಜತೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಪುಷ್ಪ-2 ಚಿತ್ರದ ಬಗ್ಗೆ ಹಂಚಿಕೊಂಡ ಬಳಿಕ ಸಿಕಿಂದರ್​ ಚಿತ್ರದ ಸೆಟ್​ನಲ್ಲಿ ನಡೆದ ಕೆಲ ಸ್ವಾರಸ್ಯಕರ ಮತ್ತು ನೆನಪುಗಳನ್ನು ಹಂಚಿಕೊಂಡಿದ್ದಾರೆ.

''ಕೆಳಮಟ್ಟದಿಂದ ಇಂದು ಆಕಾಶ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅವರೊಟ್ಟಿಗೆ ಸಿನಿಮಾ ಮಾಡುವ ಅದೃಷ್ಟ ಈಗ ಒದಗಿ ಬಂದಿದೆ. ನಾನು ಕಂಡ ಕನಸು ನನಸಾಗಿದೆ. ಶೂಟಿಂಗ್​ ವೇಳೆ ಸಲ್ಪ ಅಸ್ವಸ್ಥಳಾದೆ. ಕೂಡಲಢ ಸಲ್ಮಾನ್​ ಅವರು ಸ್ಥಳಕ್ಕೆ ಬಂದು ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು. ಅಲ್ಲದೇ, ಚಿಕಿತ್ಸೆ ಬೇಕಾದ ಎಲ್ಲಾ ತರಹದ ಸೌಲಭ್ಯ ಒದಗಿಸುವಂತೆ ಸಿಬ್ಬಂದಿಗೆ ಹೇಳಿದರು'' ಎಂದು ರಶ್ಮಿಕಾ ಹಾಡಿ ಹೊಗಳಿದ್ದಾರೆ.

''ನನ್ನ ಪ್ರಕಾರ ಸಲ್ಮಾನ್​ ಅವರು ದೇಶದ ದೊಡ್ಡ ಸ್ಟಾರ್​ ನಟರು. ಅಂತವರು ನಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ ಎಂದರೆ ಅವರ ವ್ಯಕ್ತಿತ್ವದ ಬಗ್ಗೆ ಗೊತ್ತಾಗುತ್ತದೆ ಎಂದಿರುವ ಅವರು, ಸಿಕಿಂದರ್​ ಸಿನಿಮಾ ನನಗೆ ವಿಶೇಷವಾಗಿದೆ'' ಎಂದು ಹೇಳಿದ್ದಾರೆ.

ಸಿಕಿಂದರ್​ ಸಿನಿಮಾ ಹಿನ್ನೆಲೆ ಮುಂಬೈ ಮತ್ತು ಹೈದರಾಬಾದ್​ನಲ್ಲಿ ಶೂಟಿಂಗ್​ ಮಾಡುತ್ತಿದ್ದಾರೆ. ಪುಷ್ಪ-2 ಸಿನಿಮಾ ಸಿನಿಮಾದ ಬಳಿಕ ರಶ್ಮಿಕಾ ಆಯುಶ್ಮಾನ್​ ಖುರಾನ ಅವರೊಮದಿಗೆ ಮತ್ತೊಂದು ಸಿನಿಮಾ ಮಾಡುವ ಬಗ್ಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್​).