ನ್ಯೂಸ್

ನಿಮ್ಮೊಂದಿಗೆ ಸ್ವಲ್ಪ ಮಾತನಾಡುವುದಿದೆ…! ಲಾರೆನ್ಸ್​ ಬಿಷ್ಣೋಯ್​ ನಂಬರ್​ ಕೇಳಿದ Salman Khan ಮಾಜಿ ಪ್ರೇಯಸಿ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ, ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಅವರನ್ನು ಹತ್ಯೆ ಮಾಡಿಸುವ ರಾಷ್ಟ್ರವ್ಯಾಪಿ ಸಖತ್​ ಸೌಂಡ್​ ಮಾಡುತ್ತಿರುವ ಕುಖ್ಯಾತ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ (Lawrence Bishnoi) ಅವರ ಮುಂದಿನ ಟಾರ್ಗೆಟ್​ ಸಲ್ಮಾನ್​ ಖಾನ್​ (Salman Khan) ಎಂದು ನೇರವಾಗಿಯೇ ಹೇಳಿದ್ದಾರೆ. ಇದಲ್ಲದೆ ಸಲ್ಮಾನ್​ ಖಾನ್​ (Salman Khan) ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವವರಿಗೂ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಗ್ಯಾಂಗ್​ ಎಚ್ಚರಿಸಿದ್ದು, ನಟನಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದೆಲ್ಲದರ ನಡುವೆ ಸಲ್ಮಾನ್​ ಖಾನ್​ (Salman Khan) ಮಾಜಿ ಗೆಳತಿ ಸೋಮಿ ಅಲಿ (Somy Ali) ಲಾರೆನ್ಸ್ ಬಿಷ್ಣೋಯಿ (Lawrence Bishnoi) ನಂಬರ್​ ಕೇಳಿದ್ದು, ಈ ವಿಚಾರ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಸಲ್ಮಾನ್ ಖಾನ್ (Salman Khan) ಅವರ ಮಾಜಿ ಗೆಳತಿ, ನಟಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಸೋಮಿ ಅಲಿ (Somy Ali), ಇನ್‌ಸ್ಟಾಗ್ರಾಂ (Instagram) ಮುಖಾಂತರ, ಲಾರೆನ್ಸ್ ಬಿಷ್ಣೋಯ್​ಗೆ (lawrence Bishnoi) ನಂಬರ್​ ಕೊಡುವಂತೆ ಮನವಿ ಮಾಡಿದ್ದು, ಜೈಲಲ್ಲಿದ್ದರೂ ಪರ್ವಾಗಿಲ್ಲ ಜೂಮ್ ಕಾಲ್‌ (Zoom Call) ಮಾಡಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್​ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್​ ವೈರಲ್​ ಆಗಿದೆ.

ವೈರಲ್​ ಆಗಿರುವ ಪೋಸ್ಟ್​ ನೋಡುವುದಾದರೆ ಇದು ಲಾರೆನ್ಸ್ ಬಿಷ್ಣೋಯ್‌ಗೆ (Lawrence BIshnoi) ನೇರ ಸಂದೇಶ: ನಮಸ್ತೆ, ಲಾರೆನ್ಸ್ ಭಾಯ್, ನೀವು ಜೈಲಿನಿಂದಲೂ ಜೂಮ್ ಕರೆಗಳನ್ನು ಮಾಡುತ್ತಿದ್ದೀರಿ ಎಂದು ನಾನು ಕೇಳಿದ್ದೇನೆ ಮತ್ತು ನೋಡಿದ್ದೇನೆ. ಹಾಗಾಗಿ ನನಗೂ ನಿಮ್ಮೊಂದಿಗೆ ಸ್ವಲ್ಪ ಮಾತನಾಡುವುದಿದೆ. ಇದು ಹೇಗೆ ಸಾಧ್ಯ ಎಂದು ದಯವಿಟ್ಟು ಹೇಳಿ ಇಡೀ ಪ್ರಪಂಚದಲ್ಲಿ ನಮ್ಮ ನೆಚ್ಚಿನ ಸ್ಥಳವೆಂದರೆ ರಾಜಸ್ಥಾನ (Rajasthan). ನಾವು ಪೂಜೆಗಾಗಿ ನಿಮ್ಮ ದೇವಸ್ಥಾನಕ್ಕೆ (Temple) ಬರಲು ಬಯಸುತ್ತೇವೆ.

ಅದಕ್ಕೂ ಮೊದಲು ನಿಮಗೆ ಜೂಮ್ ಕಾಲ್‌ (Zoom Call) ಮಾಡಬೇಕಿದೆ. ಪೂಜೆಯ ನಂತರ ಸ್ವಲ್ಪ ಚರ್ಚೆ ಮಾಡುವುದಿದೆ. ಆ ನಂತರ ನಿಮಗೆ ಈ ಕರೆ ಪ್ರಯೋಜನಕಾರಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ದಯವಿಟ್ಟು ನಿಮ್ಮ ಮೊಬೈಲ್ ಸಂಖ್ಯೆಯನ್ನು (Mobile Number) ನಮೂದಿಸಿ. ಅದು ನಿಮಗೆ ಉಪಕಾರವಾಗುತ್ತದೆ. ಧನ್ಯವಾದಗಳು ಎಂದು ಪೋಸ್ಟ್​ ಮಾಡಲಾಗಿದೆ. ಈ ಪೋಸ್ಟ್​ ಹೊಸ ಚರ್ಚೆಗೆ ನಾಂದಿ ಹಾಡಿದೆ.

1999ರಲ್ಲಿ ಸಲ್ಮಾನ್​ ಖಾನ್ (Salman Khan)​ ಜೊತೆ ಬ್ರೇಕಪ್​ ಆದ ಬಳಿಕ ಅಮೆರಿಕಾದಲ್ಲಿ ವಾಸಿಸುತ್ತಿರುವ ಸೋಮಿ ಅಲಿ (Somy Ali) ಈ ಹಿಂದೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೃಷ್ಣಮೃಗ ಬೇಟೆಯಾಡಿದ ವಿಚಾರವಾಗಿ ಲಾರೆನ್ಸ್​ ಬಿಷ್ಣೋಯ್​ಗೆ (Lawrence Bishnoi) ಸಲ್ಮಾನ್​ ಖಾನ್​ರನ್ನು ಕ್ಷಮಿಸುವಂತೆ ಮನವಿ ಮಾಡಿದ್ದರು. ಹಳೆಯದನ್ನು ಮರೆತುಬಿಡಿ ಆಗ ಅವನು ಚಿಕ್ಕವನು ಎಂದು ಹೇಳಿದ್ದರು. ಇದೀಗ ಲಾರೆನ್ಸ್​ ಬಿಷ್ಣೋಯ್​ ನಂಬರ್​ ಕೇಳುವ ಮೂಲಕ ನಟಿ ಮತ್ತೊಮ್ಮೆ ಸದ್ದು ಮಾಡುತ್ತಿದ್ಉದ, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.