Salman Khan: ಇದೇ ಜೂ. 21ರಿಂದ ಜನಪ್ರಿಯ ಒಟಿಟಿ ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ನಲ್ಲಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಹಾಸ್ಯ ಕಾರ್ಯಕ್ರಮ ಪ್ರಸಾರವಾಗಲಿದೆ. ಮೊದಲ ಸಂಚಿಕೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಆಗಮಿಸಿದ್ದು, ಕಪಿಲ್ ಶರ್ಮ ಅವರೊಂದಿಗೆ ಹಲವು ಕುತೂಹಲಕಾರಿ, ಹಾಸ್ಯಸ್ಪದ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಶೇ. 73 ಮಂದಿ ಪಡೆದ ಸಾಲವನ್ನು ಮತ್ತೆ ಸ್ನೇಹಿತರಿಗೆ ವಾಪಸ್ ಕೊಡುವುದಿಲ್ಲವಂತೆ: ಸಮೀಕ್ಷೆಯಲ್ಲಿ ಬಯಲು! Friendship – Money
ಕಾರ್ಯಕ್ರಮದ ಮೊದಲ ಸಂಚಿಕೆಗೆ ಭೇಟಿ ಕೊಟ್ಟಿರುವ ಸಲ್ಮಾನ್ ಖಾನ್, ಸದ್ಯ ಪ್ರೋಮೋ ತುಣುಕಿನಲ್ಲಿ ಆಡಿರುವ ಮಾತುಗಳು ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದು ಹಲವರ ಕೆಂಗಣ್ಣಿಗೂ ಗುರಿಯಾಗಿದೆ. ಪೂರ್ಣ ಸಂಚಿಕೆ ಜೂ. 21ರಂದು ಸ್ಟ್ರೀಮ್ ಆಗುವ ಮುನ್ನವೇ ನಟ ವಿಚ್ಛೇದನ ಮತ್ತು ಜೀವನಾಂಶದ ಬಗ್ಗೆ ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಸಲಿಗೆ ಸಲ್ಮಾನ್ ಖಾನ್ ಅಂತಹದ್ದೇನು ಹೇಳಿದರು ಎಂಬುದೇ ಹಲವರ ಪ್ರಶ್ನೆ.
ವೈರಲ್ ವಿಡಿಯೋ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳು ಮತ್ತು ದಾಂಪತ್ಯ ಮುರಿದುಕೊಂಡ ಮಹಿಳೆಯರು ಕೇಳುವ ಜೀವನಾಂಶ ಕುರಿತು ಸಲ್ಮಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಈ ಹಿಂದೆ, ದಂಪತಿಗಳು ಪರಸ್ಪರ ತ್ಯಾಗ ಮಾಡುತ್ತಿದ್ದರು. ಸಹಿಸಿಕೊಂಡು ಬಾಳ್ವೆ ಮಾಡುವ ಮನಸ್ಥಿತಿ ಇತ್ತು. ಆದರೆ, ಈಗ ಆ ಬದುಕಿಲ್ಲ. ಗೊರಕೆ ಹೊಡೆದರೆ, ಸಣ್ಣ ಮಾತಿಗೆ ಮನಸ್ತಾಪ ಉಂಟಾದರೆ ಡಿವೋರ್ಸ್ ಎನ್ನುತ್ತಾರೆ" ಎಂದು ಸಲ್ಮಾನ್ ಹಾಸ್ಯಸ್ಪದವಾಗಿಯೇ ಹೇಳಿದ್ದಾರೆ.
"ಸಣ್ಣ ತಪ್ಪು ತಿಳುವಳಿಕೆ ಕೂಡ ವಿಚ್ಛೇದನದಲ್ಲಿಯೇ ಅಂತ್ಯವಾಗುತ್ತಿವೆ. ಅಷ್ಟೇ ಅಲ್ಲ, ಡಿವೋರ್ಸ್ ಆದ ಬಳಿಕ ಗಂಡನ ಅರ್ಧದಷ್ಟು ಹಣವನ್ನು ಸಹ ಹೊತ್ತುಕೊಂಡು ಹೋಗುತ್ತಾರೆ" ಎಂದು ಸಲ್ಮಾನ್ ನಗುತ್ತಲೇ ಕಪಿಲ್ ಶರ್ಮ ಜೊತೆಗೆ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).