ನವದೆಹಲಿ: ಸಲ್ಮಾನ್ ಖಾನ್ ಮಾಡುವ ಕೆಲ ಪರಿಹಾಸ್ಯಗಳು ಅವರ ಅಭಿಮಾನಿಗಳನ್ನು ರಂಜಿಸಲು ಎಂದಿಗೂ ವಿಫಲವಾಗುವುದಿಲ್ಲ. ಇತ್ತೀಚೆಗೆ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳೊಂದಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಅಭಿಮಾನಿಗಳು ಐ ಲವ್ ಯೂ ಹೇಳಿದಾಗ ತಮಾಷೆಯ ಪ್ರತಿಕ್ರಿಯೆ ನೀಡಿ ತಮ್ಮ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದರು.
ಸಲ್ಮಾನ್ ಖಾನ್ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದು ಈ ಸಂದರ್ಭ ಕೆಲ ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿ ಮಾಡಿದ್ದರು. ಇದರಿಂದಾಗಿ ಎಲ್ಲರೂ ನಗೆಗಡಲಲ್ಲಿ ತೇಲಿದರು.
ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಅಭಿಮಾನಿಗಳ ಗುಂಪೊಂದು ನಟನಿಗೆ "ಐ ಲವ್ ಯೂ" ಎಂದು ಕಿರುಚುವುದನ್ನು ಕೇಳಬಹುದು. ಅದಕ್ಕೆ ಅವರು ತಕ್ಷಣವೇ "ಜಬ್ ಲಡ್ಕೆ ಇತ್ನೆ ಶಿದ್ದತ್ ಸೆ ಐ ಲವ್ ಯು ಬೋಲ್ತೆ ಹೈ, ಥೋಡಿ ಸಿ ಗರ್ಬ್ರಹತ್ ಹೋ ಝಾತಿ ಹೈ!" ಎಂದಿದ್ದಾರೆ. ಅಂದರೆ ನನ್ನ ಪುರುಷ ಅಭಿಮಾನಿಗಳು ಐ ಲವ್ ಯು ಎಂದು ಹೇಳಿದಾಗ, ನನಗೆ ಒಂದು ರೀತಿಯ ಭಯವಾಗುತ್ತದೆ" ಎಂದು ಹೇಳಿದ್ದಾರೆ.
ಇದಲ್ಲದೆ, ಸಲ್ಮಾನ್ "ಆಪ್ಕಿ ಪತ್ನಿ ಹೈ ನಾ? ಮೇರಿ ನಹೀ ಹೈ!" ಎಂದು ಅಭಿಮಾನಿಗೆ ಅವರು ಪ್ರತಿಕ್ರಿಯಿಸುವುದನ್ನು ನಾವು ಕೇಳಬಹುದು. ಇದರ ಅರ್ಥ, ಒರಟು ನಿಮಗೆ ಹೆಂಡತಿ ಇದ್ದಾಳೆ ಅಲ್ವಾ? ನನಗೆ ಮದುವೆಯಾಗಿಲ್ಲ! ಎಂದು.
ಆ ವಿಡಿಯೋ ಹೀಗಿದೆ: