ನ್ಯೂಸ್

ಪ್ರೇಯಸಿಯನ್ನು ಕೊಂದು ಹಾಸಿಗೆಯೊಳಗೆ ಬಚ್ಚಿಟ್ಟಿದ್ದ ಸೇಲ್ಸ್‌ಮ್ಯಾನ್..ಮುಂದೇನಾಯ್ತು..!Live-In Partner

Live-In Partner: ವ್ಯಕ್ತಿಯೊಬ್ಬ ಹತ್ತು ವರ್ಷಗಳಿಂದ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದ ಸಂಗಾತಿಯನ್ನು ಕೊಂದು ಮಂಚದ ಬಾಕ್ಸ್​ನಲ್ಲಿ ಬಚ್ಚಿಟ್ಟಿದ್ದ ಘಟನೆ ಫರೀದಾಬಾದ್​ನಲ್ಲಿ ನಡೆದಿದೆ.

ಆರೋಪಿ ಜಿತೇಂದ್ರ ತನ್ನ ಸಂಗಾತಿ ಸೋನಿಯಾಳನ್ನು ಕೊಲೆ ಮಾಡಿ, ಅಕ್ಕಪಕ್ಕದ ಮನೆಯವರಿಗೆ ಕೊಳೆತ ದೇಹದ ವಾಸನೆ ಬಾರದಂತೆ ತಡೆಯಲು ಧೂಪ, ಊದಿನ ಕಡ್ಡಿಯ ಹೊಗೆ ಹಾಕಿ, ಆಕೆಯ ಮೃತದೇಹವನ್ನು ಹಾಸಿಗೆಯ ಬಾಕ್ಸ್ನಲ್ಲಿ ಮುಚ್ಚಿಟ್ಟು ನಂತರ ತನ್ನ ಅಜ್ಜಿಯ ಬಳಿಗೆ ಹೋಗಿ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.

ಈ ವಿಷಯ ಕೇಳುತ್ತಿದ್ದಂತೆಯೇ ಅವನ ಅಜ್ಜಿ ಭಯಗೊಂಡು ಕೂಡಲೇ ಪೊಲೀಸರಿಗೆ ಫೋನ್​​​ ಮಾಡಿ ಮಾಹಿತಿ ತಿಳಿಸಿದ್ದಳು. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಮನೆಗೆ ಧಾವಿಸಿದ್ದಾರೆ. ಆದರೆ ಮನೆಗೆ ಬೀಗ ಹಾಕಲಾಗಿತ್ತು. ನಂತರ ಪೊಲೀಸರು ಮನೆ ಮಾಲೀಕರ ಸಹಾಯದಿಂದ ಬೀಗ ತೆಗೆಸಿ ಮನೆಗೆ ಪ್ರವೇಶಿಸಿದಾಗ ಮಲಗುವ ಕೋಣೆಯಿಂದ ಕೆಟ್ಟ ದುರ್ವಾಸನೆ ಬರುತ್ತಿತ್ತು, ನಂತರ ಹಾಸಿಗೆಯನ್ನು ತೆಗೆದಾಗ ಅದರಲ್ಲಿ ಅದರ ಒಳಗೆ ಕೊಳೆತ ಸ್ಥಿತಿಯಲ್ಲಿ ಸೋನಿಯಾಳ ಶವವನ್ನು ಹೊರತೆಗೆದರು. ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಸೈಕಲ್​​ನಲ್ಲಿ ಬಟ್ಟೆ ಮಾರುತ್ತಿದ್ದ ಜಿತೇಂದ್ರ, ಬದ್ಖಾಲ್ ಕಾಲೋನಿಯಲ್ಲಿನ ಸೋನಿಯಾಳೊಂದಿಗೆ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದ. ಅವನ ಮೊದಲ ಹೆಂಡತಿ 12 ವರ್ಷಗಳ ಹಿಂದೆ ನಿಧನಳಾಗಿದ್ದಳು, ಅವರಿಗೆ ಎರಡು ಮಕ್ಕಳಿದ್ದರೂ ಹೆಂಡತಿ ಸತ್ತ ನಂತರ ಆತನು ಮಕ್ಕಳೊಂದಿಗೆ ಯಾವುದೇ ಸಂಪರ್ಕ ವಿಟ್ಟುಕೊಂಡಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶನಿವಾರ ರಾತ್ರಿ, ಜಿತೇಂದ್ರ ತನ್ನ ಅಜ್ಜಿಯ ಬಳಿಗೆ ಬಂದು, "ನಾನು ಸೋನಿಯಾಳನ್ನು ಕೊಂದಿದ್ದೇನೆ, ಪೊಲೀಸ್​​​ಗೆ ಶರಣಾಗಲು ಹೋಗುತ್ತಿದ್ದೇನು ಎಂದು ಹೇಳಿ ಹೊರಟಿದ್ದಾನೆ. ಆದರೆ ಅವನು ಪೊಲೀಸ್ ಠಾಣೆಗೆ ಬರಲೇ ಇಲ್ಲ. ಮೊಮ್ಮಗ ಹೇಳಿದ ವಿಷಯ ತಿಳಿದ ನಂತರ ಅಜ್ಜಿ ಸುಂದರಿ ದೇವಿ ಭಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಳು.

ಈಗ ತಲೆಮರೆಸಿಕೊಂಡಿರುವ ಆರೋಪಿ ಜಿತೇಂದ್ರ ಸೆರೆಹಿಡಿಯಲು ಪೊಲೀಸ್​​ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)