ನ್ಯೂಸ್

Google CEO ಸುಂದರ್​ ಪಿಚೈರನ್ನು ಮೀರಿಸುವ ಸಂಭಾವನೆ; ಕಾರ್ಪೊರೇಟ್ ಕ್ಷೇತ್ರದ ಇತಿಹಾಸದಲ್ಲೇ ದಾಖಲೆ ಬರೆದ ಬ್ರಿಯಾನ್ ನಿಕೋಲ್ ವೇತನ ಎಷ್ಟು ಗೊತ್ತಾ?

ಸಾಮಾನ್ಯವಾಗಿ ಸಾಫ್ಟ್​ವೇರ್​ನ ಗೂಗಲ್​, ಆ್ಯಪಲ್​, ಮೈಕ್ರೋಸಾಫ್ಟ್​ನಂತಹ ದೈತ್ಯ ಕಂಪನಿಗಳ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ(ಸಿಇಒ)ಗಳಿಗೆ ತಿಂಗಳ ವೇತನ ಅತಿ ಹೆಚ್ಚು ಎಂದು ಭಾವಿಸಲಾಗಿದೆ. ಆದರೆ, ಇದೀಗ ಕಾರ್ಪೊರೇಟ್​ ಜಗತ್ತಿನಲ್ಲೇ ಅತ್ಯಧಿಕ ವೇತನ ಪಡೆಯುವ ಮೂಲಕ ಸ್ಟಾರ್‌ಬಕ್ಸ್ CEO ಬ್ರಿಯಾನ್ ನಿಕೋಲ್ ಹೊಸ ದಾಖಲೆ ಬರೆದಿದ್ದಾರೆ.

ಹೌದು, 50 ವರ್ಷದ ನಿಕೋಲ್​ ಮೊದಲು ಚಿಪಾಟ್ಲ(CEO of Chipotle) ಸಿಇಒ ಆಗಿದ್ದ ಇತ ಇದೀಗ ಸ್ಟಾರ್‌ಬಕ್ಸ್ ಕಂಪನಿಯ ಸಿಇಒ ಅಧಿಕಾರ ವಹಿಸಿಕೊಂಡಿದ್ದು, ಕೇಲವ ನಾಲ್ಕು ತಿಂಗಳಿಗೆ 96 ಮಿಲಿಯನ್​​ ಡಾಲರ್ ವೇತನ ಎಂದು ವರದಿಯಾಗಿದೆ.

ಇವರ ನಾಲ್ಕು ತಿಂಗಳ ವೇತನ ಆ್ಯಪಲ್​ ಮತ್ತು ಗೂಗಲ್​ ಸಿಇಒಗಳಾದ ಟೀಮ್​ ಕುಕ್​, ಸುಂದರ್​ ಪಿಚೈಗಿಂತ ಅಧಿಕ ವೇತನವಾಗಿದೆ. (ಕಳೆದ ವರ್ಷ ಇಬ್ಬರು ಸಿಇಒಗಳು 75 ಮಿಲಿಯನ್​ ಡಾಲರ್​ ವೇತನ ಪಡೆದಿದ್ದಾರೆ) ಈ ಮೂಲಕ ಅಮೆರಿಕದ ಕಾರ್ಪೊರೇಟ್​ ಜಗತ್ತಿನಲ್ಲಿ ಅತ್ಯಧಿಕ ಮತ್ತು ಅಧಿಕ ವೇತನ ಪಡೆಯುವ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ ಎಂದು ವರದಿ ಉಲ್ಲೇಖಿಸಿವೆ.

ಮೊದಲು ಚಿಪಾಟ್ಲ್‌ನ CEO ಆಗಿದ್ದ ನಿಕೋಲ್, ಸೆಪ್ಟೆಂಬರ್ 2024 ರಲ್ಲಿ ಸ್ಟಾರ್‌ಬಕ್ಸ್‌ಗೆ ಸೇರಿದರು. ಕಂಪನಿಯ ಫೈಲಿಂಗ್‌ಗಳಲ್ಲಿ ಬಹಿರಂಗಪಡಿಸಿದಂತೆ ಅವರ ಹೊಸದಾಗಿ ಕಾಲಿಟ್ಟ ಮೊದಲ ತಿಂಗಳೊಳಗೆ ಅವರಿಗೆ 5 ಮಿಲಿಯನ್ ಡಾಲರ್​ ಸೈನ್-ಆನ್ ಬೋನಸ್ ನೀಡಲಾಯಿತು. ಅವರ ಗಳಿಕೆಯ 94% ಸ್ಟಾಕ್ ಪ್ರಶಸ್ತಿಗಳಿಂದ ಬಂದಿದೆ. ಇದು ಮೂರು ವರ್ಷಗಳ ಅವಧಿಯಲ್ಲಿ ಕಂಪನಿಯ ಕಾರ್ಯಕ್ಷಮತೆಗೆ ಸಂಬಂಧಿಸಿದೆ. ಅಲ್ಲದೆ, ಅವರು ಸ್ಟಾರ್​ಬಕ್ಸ್​ ಕಾಲಿಟ್ಟಗಿನಿಂದ ಸ್ಟಾರ್​ಬಕ್ಸ್​ ಕಂಪನಿ ಉನ್ನತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳಲಾಗಿದೆ.

ನಿಕೋಲ್‌ನ ಒಟ್ಟು ವಾರ್ಷಿಕ ವೇತನ ಪ್ಯಾಕೇಜ್ 113 ಮಿಲಿಯನ್ ಡಾಲರ್​ ಎಂದು ಅಂದಾಜಿಸಲಾಗಿದ್ದು, ಇದರಿಂದಾಗಿ ಅವರನ್ನು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ 20 ಸಿಇಒಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.(ಏಜೆನ್ಸೀಸ್​)