ನ್ಯೂಸ್

ಸಾಯಿ ಪಲ್ಲವಿಯ ಮೊದಲ ಬಾಲಿವುಡ್ ಚಿತ್ರ ಇದೇ ನೋಡಿ! ಅಮೀರ್ ಖಾನ್ ಪುತ್ರನ ಜತೆ ನಟನೆ | Sai Pallavi

Sai Pallavi: ತನ್ನ ಸಾಧಾರಣ ಗ್ಲಾಮರ್​ನಿಂದಲೇ ದಕ್ಷಿಣ ಭಾರತೀಯ ಸಿನಿಮಾದಲ್ಲಿ ಖ್ಯಾತಿ ಗಳಿಸಿರುವ ಲೇಡಿ ಪವರ್ ಸ್ಟಾರ್ ಎಂದೇ ಕರೆಸಿಕೊಂಡಿರುವ ನಟಿ ಸಾಯಿ ಪಲ್ಲವಿ ಬಾಲಿವುಡ್​ಗೆ ಪಾದರ್ಪಣೆ ಮಾಡಿದ್ದು, ರಾಮಾಯಣ ಎಂಬ ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಗೊತ್ತಿದೆ. ಆದರೆ ಅದಕ್ಕೂ ಮೊದಲು ಅವರ ಮತ್ತೊಂದು ಬಾಲಿವುಡ್​ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

ಬಾಲಿವುಡ್ ನಟ ಅಮಿರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ ಹೊಸ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎನ್ನಲಾಗಿದೆ. ಚಿತ್ರಕ್ಕೆ "ಮೇರೆ ರಹೋ" ಎಂದು ಹೆಸರಿಡಲಾಗಿದೆ. ಸುನೀಲ್ ಪಾಂಡೆ ನಿರ್ಧರಿಸಿದ್ದಾರೆ. ಸ್ವತಃ ಆಮಿರ್ ಖಾನ್ ಪ್ರೊಡಕ್ಷನ್ಸ್ ಜೊತೆ ಮನ್ಸೂರ್ ಖಾನ್ ಈ ಸಿನಿಮಾ ನಿರ್ಮಿಸಿದ್ದಾರೆ. 2025 ಡಿಸೆಂಬರ್ 12ಕ್ಕೆ ಚಿತ್ರತಂಡ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದೆ.

ಈ ಮೊದಲು ಚಿತ್ರಕ್ಕೆ ಏಕ್ ದಿನ್ ಎಂದು ಹೆಸರಿಡಲಾಗಿತ್ತು. ನವೆಂಬರ್ 7ರಂದು ಬಿಡುಗಡೆಗೆ ನಿರ್ಧರಿಸಲಾಗಿತ್ತು. ಆದರೆ ಅದೇ ದಿನ ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯನಂದ ಅವರ ಚೊಚ್ಚಲ ಸಿನಿಮಾ ‘ಇಕ್ಕಿಸ್’ ಚಿತ್ರ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಎರಡು ಚಿತ್ರಗಳ ನಡುವೆ ಘರ್ಷಣೆ ಬೇಡ ಎಂದು ದಿನಾಂಕವನ್ನು ಮುಂದೂಡಲಾಗಿದೆ.

ಮೇರೆ ರಹೋ ಒಂದು ಸುಂದರ ಪ್ರೇಮ ಕಥೆ ಎನ್ನಲಾಗಿದೆ. ಚಿತ್ರದ ಬಹುಭಾಗ ಜಪಾನ್​ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮೇರೆ ರಹೋ ಸಿನಿಮಾ ಸಾಯಿ ಪಲ್ಲವಿಯ ಮೊದಲ ಬಾಲಿವುಡ್ ಚಿತ್ರ, ರಾಮಾಯಣ ಎರಡನೇ ಚಿತ್ರ. ಹಾಗೆಯೇ ಅಮಿರ್ ಪುತ್ರ ಜುನೈದ್​ ಖಾನ್​ಗೆ ಇದು ಮೂರನೇ ಸಿನಿಮಾ. ಆದರೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಸಿನಿಮಾ. ಮೊದಲ ಸಿನಿಮಾ ಲವ್ಯಾಪ ಅಷ್ಟೇನು ಖ್ಯಾತಿಗಳಿಸಲಿಲ್ಲ. ಓಟಿಟಿಯಲ್ಲಿ ಬಿಡುಗಡೆಯಾದ ಮಹಾರಾಜ್ ಸಿನಿಮಾ ಉತ್ತಮ ವಿಮರ್ಶೆಯನ್ನು ಪಡೆದುಕೊಂಡಿದೆ. ಸಾಯಿ ಪಲ್ಲವಿ ಜೊತೆಗಿನ ಈ ಚಿತ್ರವು ಜುನೈದ್ ವೃತ್ತಿಜೀವನಕ್ಕೆ ಒಂದು ತಿರುವು ಕೊಡಲಿದೆ ಎನ್ನುವ ನಿರೀಕ್ಷೆಯಿದೆ. (ಏಜೆನ್ಸೀಸ್)