ನ್ಯೂಸ್

7 ಅಡಿ ಉದ್ದದ ಹಾವನ್ನು ಹಿಡಿದಿಟ್ಟುಕೊಂಡಿರುವ ಚೇಳು; ದೃಶ್ಯ ನೋಡಿದ್ರೆ ಆಶ್ಚರ್ಯ ಆಗೋದು ಗ್ಯಾರಂಟಿ

ಹಾವು ಮತ್ತು ಮಂಗುಸಿ ಸ್ವಭಾವತಃ ಶತ್ರುಗಳು. ಎರಡು ಪರಸ್ಪರ ಎದುರಾದಾಗ ಅವುಗಳ ಜಗಳ ಸಾಮಾನ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಜತೆಗೆ ಹಾವು ಮತ್ತು ಮುಂಗುಸಿಯ ನಡುವಿನ ಕಾದಾಟದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ನೋಡುತ್ತಿರುತ್ತೇವೆ. ಆದರೆ ಸದ್ಯ ಜಾಲತಾಣದಲ್ಲಿ ವಿಡಿಯೋವೊಂದ ವೈರಲ್​ ಆಗಿದ್ದು ಅದರಲ್ಲಿ ಹಾವು ಮತ್ತು ಮುಂಗುಸಿ ನಡುವಿನ ಜಗಳ ಅಲ್ಲ ಹಾವು ಮತ್ತು ಚೇಳಿನ ನಡುವಿನ ಜಗಳವನ್ನು ಕಾಣಬಹುದಾಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಚೇಳು ಹಾವನ್ನು ಸೋಲಿಸಿರುವಂತೆ ಕಾಣುತ್ತದೆ. 7 ಅಡಿ ಉದ್ದದ ಹಾವು 15 ಸೆಂ.ಮೀ. ಉದ್ದದ ಚೇಳಿನ ಮುಂದೆ ಅಸಹಾಯಕತೆಯಿಂದಿದೆ ಎನ್ನಿಸುತ್ತದೆ. ಚೇಳು ತನ್ನ ಕುಟುಕಿನ ಸಹಾಯದಿಂದ ಏಳು ಅಡಿ ಉದ್ದದ ಹಾವನ್ನು ತನ್ನ ಹಿಡಿತದಲ್ಲಿ ಹಿಡಿದಿರುವುದನ್ನು ಕಾಣಬಹುದು. 9 ಸೆಕೆಂಡ್​ ಇರುವ ಈ ಕ್ಲಿಪ್ ನೋಡಿದಾಗ ಹಾವು ಚೇಳನ್ನು ಹಿಡಿದೆದೆಯೋ ಅಥವಾ ಚೇಳು ಹಾವನ್ನು ಹಿಡಿದಿದೆಯೋ ಎಂದು ಊಹಿಸುವುದು ಕಷ್ಟವಾಗುತ್ತದೆ.

ಆದರೆ ಹೆಬ್ಬಾವು ಚೇಳನ್ನು ತಿನ್ನಲು ಮುಂದಾಗಿದೆ. ಆದರೆ ಚೇಳು ಪ್ರಯತ್ನಿಸುತ್ತಿರುವ ಚೇಳು ತನ್ನ ಗಂಟಲು ತಲುಪೊಉವ ಮುನ್ನವೆ ಮೂಳೆಯಂತೆ ಮಾರ್ಪಟ್ಟಿದೆ. ನಾನು ಬೇಟೆಯಾಗಲು ಸಿದ್ಧವಿಲ್ಲ ಎಂದು ಚೇಳು ಖಡಕ್​ ಆಗಿ ನಿಂತಿರುವಂತೆ ಭಾಸವಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಈ ವಿಡಿಯೋ ಆಸಕ್ತಿದಾಯಕವಾಗಿ ನೆಟ್ಟಿಗರನ್ನು ಆಕರ್ಷಿಸುತ್ತಿದೆ.

ಚೇಳುಗಳು ಸಹ ವಿಷಕಾರಿ ಎಂಬುದು ನಮಗೆ ತಿಳಿದದೆ. ಆದರೆ ಚೇಳಿಗಿಂತ ಹಾವಿನಲ್ಲಿ ಹೆಚ್ಚು ವಿಷವಿರುತ್ತದೆ. ಈ ವಿಡಿಯೋದಲ್ಲಿ ಒಂದು ಮೆಸೇಜ್​​ ಇದೆ. ಅದೆನೆಂದರೆ ನಿಮ್ಮ ಗಾತ್ರದಿಂದ ಎದುರಾಳಿಯನ್ನು ಗೆಲ್ಲುತ್ತೀರೋ ಇಲ್ಲವೋ ಎಂಬುದು ಮುಖ್ಯವಲ್ಲ, ಆದರೆ ನಿಮ್ಮ ವಿಶೇಷತೆ ಮತ್ತು ಇಚ್ಛಾಶಕ್ತಿಯು ಎದುರಾಳಿಯನ್ನು ಸೋಲಿಸಬಹುದೇ ಅಥವಾ ಇಲ್ಲವೇ ಎಂದಿ ನಿರ್ಧರಿಸುತ್ತದೆ ಎಂಬುದನ್ನು ಅರಿತುಕೊಳ್ಳಬಹುದು.