ಭಾಗ್ಪಾಟ (ಉತ್ತರ ಪ್ರದೇಶ): ಕರೊನಾ ವೈರಸ್ನ ಈ ದಿನಗಳಲ್ಲಿ ಉಗುಳಬೇಡಿ ಎಂದು ಯುವಕನೊಬ್ಬನಿಗೆ ಬುದ್ಧಿಮಾತು ಹೇಳಿದ್ದಕ್ಕೆ, ಆ ಯುವಕ ಇವರ ಮನೆಯಲ್ಲಿದ್ದ 11 ಪಾರಿವಾಳಗಳನ್ನು ಕೊಲೆ ಮಾಡಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಭಾಗ್ಪಾಟದಲ್ಲಿ ನಡೆದಿದೆ.
ರಾಹುಲ್ ಸಿಂಗ್ ಎಂಬುವವರಿಗೆ ಸೇರಿರುವ ಪಾರಿವಾಳಗಳನ್ನು ಕೊಂದಿರುವ ಆರೋಪವನ್ನು ಧರಂಪಾಲ್ ಸಿಂಗ್ ಎಂಬಾತ ಎದುರಿಸುತ್ತಿದ್ದಾನೆ.
ಧರಂಪಾಲ್, ರಾಹುಲ್ ಅವರ ಮನೆಯ ಪ್ರವೇಶದ್ವಾರದಲ್ಲಿ ಉಗುಳಿದ್ದ. ಇದರಿಂದ ಸಿಟ್ಟುಗೊಂಡ ಧರಂಪಾಲ್, ಹೀಗೆ ಉಗುಳುವುದು ಸರಿಯಲ್ಲ, ಅದರಲ್ಲಿಯೂ ಕರೊನಾ ವೈರಸ್ನ ಈ ದಿನಗಳಲ್ಲಿ ಇಂಥ ಕೃತ್ಯ ನಿಷೇಧ ಎಂದಿದ್ದಾರೆ.
ಇದರಿಂದ ಸಿಟ್ಟುಗೊಂಡ ಧರಂಪಾಲ್ ಮನೆಯ ಛಾವಣಿ ಏರಿ, ಅಲ್ಲಿ ಪಂಜರದಲ್ಲಿದ್ದ 11 ಪಾರಿವಾಳಗಳನ್ನು ಕಲ್ಲಿನಿಂದ ಹೊಡೆದು ಸಾಯಿಸಿದ್ದಾನೆ! ನಂತರ ಸತ್ತ ಪಾರಿವಾಳಗಳ ವಿಡಿಯೋ ಮಾಡಿ ಅದನ್ನು ರಾಹುಲ್ ಅವರಿಗೆ ಕಳುಹಿಸಿದ್ದಾನೆ.
ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಧರಂಪಾಲ್ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯುವಕ ಸದ್ಯ ಎಸ್ಕೇಪ್ ಆಗಿದ್ದು, ಆತನನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.