ನ್ಯೂಸ್

ಮಾಸ್ಕ್‌ ಹಾಕಿಲ್ವಾ? ಹೊಡೀರಿ ಬಸ್ಕಿ! ನಡುರಸ್ತೆಯಲ್ಲಿ ನಗರಸಭೆ ಸಿಬ್ಬಂದಿ ಸುಸ್ತೋ ಸುಸ್ತು...

suchetana

ಯಾದಗಿರಿ: ಮಾಸ್ಕ್‌ ಧರಿಸಿ, ಕರೊನಾದಿಂದ ತಕ್ಕಮಟ್ಟಿಗಾದರೂ ಪಾರಾಗಿ ಎಂದು ಜನರಿಗೆ ಹೇಳಬೇಕಿದ್ದ ನಗರಸಭೆಯ ಸಿಬ್ಬಂದಿಯೇ ಮಾಸ್ಕ್‌ ಹಾಕದೇ ಓಡಾಟ ನಡೆಸಿರುವ ಕಾರಣ ಅವರಿಗೆ ಬಸ್ಕಿ ಹೊಡೆಸಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ನಡೆದಿದೆ.

ಸುರಪುರ ನಗರಸಭೆ ಸಿಬ್ಬಂದಿ ಮಾಸ್ಕ್ ಧರಿಸದೇ ಓಡಾಟ ನಡೆಸುತ್ತ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಆಯುಕ್ತ ಜೀವನ ಕಟ್ಟೀಮನಿ ಅವರು, ಸಿಬ್ಬಂದಿಗೆ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ ಮಾಸ್ಕ್ ಧರಿಸದೇ ಇದ್ದರೇ, ಲಾಠಿ ರುಚಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸದ್ಯ ಮೂವರು ಸಿಬ್ಬಂದಿ ಆಯುಕ್ತರ ಕೈಗೆ ಸಿಕ್ಕಿಬಿದ್ದಿದ್ದು, ಬಸ್ಕಿ ಹೊಡೆದಿದ್ದಾರೆ. ಇದರಿಂದ ಉಳಿದವರೂ ಹೆದರಿ ಮಾಸ್ಕ್‌ ಧರಿಸಿ ಓಡಾಡಲು ಶುರು ಮಾಡಿದರು.