ನ್ಯೂಸ್

ಸಂಸತ್ತಿನಲ್ಲಿ ಕಲಾಪ ನಡೀತಿದ್ರೆ ಲ್ಯಾಪ್​ಟಾಪ್​ ತೆರೆದು ಸಂಸದೆ ಹೀಗೆ ಮಾಡೋದಾ? ಟೀಕೆಗಳ ಸುರಿಮಳೆ...

ಮಲೇಷಿಯಾ: ಅಧಿವೇಶನ, ಸಂಸತ್​ ಕಲಾಪ ನಡೆಯುತ್ತಿರುವ ವೇಳೆ ಗಣ್ಯರು ಎನಿಸಿಕೊಂಡ ವ್ಯಕ್ತಿಗಳು ಮಾಡಬಾರದ್ದೆಲ್ಲಾ ಮಾಡಿರುವ ಹಲವಾರು ಘಟನೆಗಳು ನಡೆದಿವೆ. ಮೊಬೈಲ್​ನಲ್ಲಿ ನೋಡಬಾರದ್ದನ್ನೆಲ್ಲಾ ನೋಡುತ್ತಾ ಕುಳಿತಿರುವ ವಿಡಿಯೋಗಳು ವೈರಲ್​ ಆಗಿವೆ.

ಇದೀಗ ಅಂಥದ್ದೇ ಒಂದು ಘಟನೆ ಮಲೇಷಿಯಾದಲ್ಲಿ ನಡೆದಿದೆ. ಆದರೆ ಕರ್ನಾಟಕದಲ್ಲಿ ಸಚಿವರು, ಶಾಸಕರು ಮೊಬೈಲ್​ನಲ್ಲಿ ನೋಡುತ್ತಾ ಕುಳಿತ ವಿಡಿಯೋವನ್ನೇನೂ ಈ ಸಂಸದೆ ನೋಡಲಿಲ್ಲ. ಬದಲಿಗೆ ಅವರು ಮಾಡಿದ್ದು ಆನ್​ಲೈನ್​ ಶಾಪಿಂಗ್​!

ಸಂಸತ್ತಿನ ಕಲಾಪ ನಡೆಯುತ್ತಿರುವಾಗಲೇ ಲ್ಯಾಪ್​ಟಾಪ್​ ಓಪನ್​ ಮಾಡಿದ ಸಂಸದೆ ಗಾಜಿ ಬುಟಾ ಆನ್​ಲೈನ್​ನಲ್ಲಿ ಜೀನ್ಸ್ ಮತ್ತು ಟಾಪ್‌ಗಳನ್ನು ಶಾಪಿಂಗ್​ ಮಾಡುತ್ತಿದ್ದಾರೆ. ದೇಶದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವ ವೇಳೆ ಸಂಸದೆ ಹೀಗೆ ಮಾಡಿದ್ದರಿಂದ ಭಾರಿ ಟೀಕೆಗೆ ಗುರಿಯಾಗಿದ್ದಾರೆ.

ಈ ಸಂಸದೆ ಷಾಪಿಂಗ್​ ಮಾಡುತ್ತಿದ್ದ ಚಿತ್ರಗಳನ್ನು ವಿರೋಧ ಪಕ್ಷದ ನಾಯಕರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗ ಮಹಿಳಾ ಸಂಸದೆಗೆ ಸಂಕಷ್ಟ ಎದುರಾಗಿದೆ. ಮಲೇಷ್ಯಾದ ಮಾಜಿ ಸಂಸದ ವೀ ಚೂ ಕಿಯೋಂಗ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇದನ್ನು ಶೇರ್​ ಮಾಡಿಕೊಂಡಿದ್ದು, ಸಂಸದೆ ಯಾವುದೇ ಕೆಲಸ ಮಾಡದೆ ಉಚಿತ ಸಂಬಳ ಪಡೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.