ನ್ಯೂಸ್

ಪಕ್ಕದ ಮನೆಯ ಮಹಿಳೆಯನ್ನು ಎಳೆದೊಯ್ದ ಪತಿ- ರೇಪ್‌ ಮಾಡುವಾಗ ವಿಡಿಯೋ ಮಾಡಿದ ಪತ್ನಿ!

ವಿಜಯವಾಡ: ಪಕ್ಕದ ಮನೆಯಲ್ಲಿ ವಾಸವಾಗಿದ್ದ ಮಹಿಳೆಯನ್ನು ಪತಿಯೊಬ್ಬ ಎಳೆದೊಯ್ದು ರೇಪ್‌ ಮಾಡಿದರೆ, ಅದನ್ನು ಆತನ ಪತ್ನಿ ವಿಡಿಯೋ ಮಾಡಿರುವ ಅಮಾನವೀಯ ಘಟನೆಯೊಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ದಿಲೀಪ್​ ಮತ್ತು ತುಳಸಿ ಎಂಬ ದಂಪತಿ ಇಂಥದ್ದೊಂದು ಹೀನ ಕೃತ್ಯ ಎಸಗಿದ್ದಾರೆ. ಸಂತ್ರಸ್ತೆ ತನ್ನ ಇಬ್ಬರು ಮಕ್ಕಳ ಜತೆ ಮನೆಯಲ್ಲಿ ಮಲಗಿದ್ದರು. ಆಕೆಯ ಪತಿ ಕೆಲಸದ ನಿಮಿತ್ತ ಹೊರ ಹೋಗಿದ್ದರು. ಈ ಸಮಯದಲ್ಲಿ ದಿಲೀಪ್‌ ಮತ್ತು ತುಳಸಿ ದಂಪತಿ ಆಕೆಯ ಮನೆಯೊಳಕ್ಕೆ ನುಗ್ಗಿದ್ದಾರೆ. ರಾತ್ರಿ 11 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ದಿಲೀಪ್‌ ಮಹಿಳೆಯ ಬಾಯಿ ಮುಚ್ಚಿ ಆಕೆಯನ್ನು ತಮ್ಮ ಮನೆಗೆ ಎಳೆದುಕೊಂಡು ಹೋಗಿದ್ದಾನೆ.

ಅಲ್ಲಿ ದಿಲೀಪ್‌ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲಿಯೇ ಇದ್ದ ಆತನ ಪತ್ನಿ ತುಳಸಿ ಇದರ ವಿಡಿಯೋ ಮಾಡಿಕೊಂಡಿದ್ದಾಳೆ!

ಈ ವಿಷಯ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದು, ಯಾರ ಬಳಿಯಾದರೂ ಬಾಯಿಬಿಟ್ಟರೆ ಆಕೆಯ ಇಬ್ಬರು ಮಕ್ಕಳನ್ನು ಕೊಲ್ಲುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಇಷ್ಟು ಆಗುತ್ತಿದ್ದಂತೆಯೇ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಪಾಪಿ ದಿಲೀಪ್‌ ತನ್ನ ಸ್ನೇಹಿತರು ಇಲ್ಲಿಗೆ ಬರುತ್ತಾರೆ. ಅವರ ಜತೆಯೂ ಸಹಕರಿಸಬೇಕು ಎಂದು ಹೇಳಿದ್ದಾನೆ!

ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರಿಗೆ ಮಹಿಳಾ ಪೊಲೀಸ್​ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.