ನ್ಯೂಸ್

ಜಗತ್ತಿನ ನಾಲ್ಕನೇ ಸಿರಿವಂತರ ಕುಟುಂಬದ ಕುಡಿಯ ಹೆಸರು ಬಹಿರಂಗ: ಇದರಲ್ಲಿದೆಯೊಂದು ವಿಶೇಷ

ಮುಂಬೈ: ಜಗತ್ತಿನ ನಾಲ್ಕನೇ ಅತಿ ದೊಡ್ಡ ಶ್ರೀಮಂತ ಎಂಬ ಖ್ಯಾತಿ ಗಳಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರು ಇದೇ 10ರಂದು ಅಜ್ಜ ಆಗಿದ್ದಾರೆ. ಮುಕೇಶ್​ ಮತ್ತು ನೀತಾ ಅಂಬಾನಿಯವರ ಮಗ ಆಕಾಶ್​ ಪತ್ನಿ ಶ್ಲೋಕಾ ಅವರಿಗೆ 10ರಂದು ಗಂಡುಮಗು ಜನಿಸಿದೆ.

2019ರ ಮಾರ್ಚ್​ ತಿಂಗಳಿನಲ್ಲಿ ನೀತಾ ಮತ್ತು ಆಕಾಶ್​ ಅವರ ಮದುವೆ ನಡೆದಿತ್ತು. ಮಗುವು ಹುಟ್ಟುತ್ತಿದ್ದಂತೆಯೇ ಕೃಷ್ಣ ಪರಮಾತ್ಮನ ದಯೆ ಮತ್ತು ಆಶೀರ್ವಾದದಿಂದ ಶ್ಲೋಕಾ ಹಾಗೂ ಆಕಾಶ್ ಅಂಬಾನಿ ಅವರಿಗೆ ಗಂಡು ಸಂತಾನವಾಗಿದೆ ಎಂದು ಸಂತಸ ಹಂಚಿಕೊಂಡಿದ್ದ ಮುಕೇಶ್​ ಅಂಬಾನಿ ಮಗುವನ್ನು ಹಿಡಿದುಕೊಂಡು ಫೋಟೋಗೆ ನೀಡಿರುವ ಪೋಸ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿತ್ತು.

ಈ ಆಗರ್ಭ ಸಿರಿವಂತನ ಮನೆಗೆ ಮಗಳು ಬರುತ್ತಾಳೋ, ಮಗ ಬರುತ್ತಾನೋ ಎಂದು ಬಹುಮಂದಿ ಕಾತರದಿಂದ ಕಾಯುತ್ತಿದ್ದರು. ಇದೀಗ ಗಂಡುಮಗು ಹುಟ್ಟುವುದರೊಂದಿಗೆ ಆ ಕಾತರ ಹೋಗಿದೆ. ಈಗ ಆ ಮಗುವಿಗೆ ಏನು ಹೆಸರು ಇಡಬಹುದು ಎಂದು ಹಲವರು ಕಮೆಂಟ್​ ಮೂಲಕ ಚರ್ಚೆ ಶುರುಮಾಡಿದ್ದರು.

ಇದೀಗ, ಆ ಕುತೂಹಲವೂ ತಣಿದಿದೆ. ಏಕೆಂದರೆ ತಮ್ಮ ಮೊಮ್ಮಗುವಿಗೆ ಮುಕೇಶ್​ ದಂಪತಿ ಪೃಥ್ವಿ ಎಂದು ಹೆಸರು ಇಟ್ಟಿದ್ದಾರೆ.

ಅಷ್ಟಕ್ಕೂ ಈ ಹೆಸರೇಕೆ ಎಂದು ಅನೇಕ ಮಂದಿ ಅವರನ್ನು ಪ್ರಶ್ನಿಸಿದರಂತೆ. ಅದಕ್ಕೆ ಅವರು ನೀಡಿರುವ ಉತ್ತರ ಎಂದರೆ, ನಮ್ಮ ಮನೆಯಲ್ಲಿ ಆಕಾಶ ಇದ್ದಾನೆ. ಆಕಾಶ ಒಂದೇ ಇದ್ದರೆ ಸಾಲದು, ಭೂಮಿಯೂ ಬೇಕಲ್ಲ, ಅದಕ್ಕಾಗಿಯೇ ಆಕಾಶನ ಮಗವಿನಗೆ ಪೃಥ್ವಿ ಎಂದು ಹೆಸರು ಇಟ್ಟಿದ್ದೇನೆ ಎಂದಿದ್ದಾರೆ.