ನ್ಯೂಸ್

VIDEO: 50 ಲಕ್ಷ ರೂ. ಕೊಟ್ರೆ ಟಿಕೆಟ್‌ ಕೊಡ್ತೆ ಅಂದ್ರು... ಮೋಸ ಮಾಡಿದ್ರು... ಬಿಕ್ಕಿ ಬಿಕ್ಕಿ ಅತ್ತ ಕಾರ್ಯಕರ್ತ- ವಿಡಿಯೋ ವೈರಲ್

ಲಖನೌ: ಪಂಚರಾಜ್ಯಗಳ ಚುನಾವಣೆಗೆ ದಿನಾಂಕ ನಿಗದಿಯಾಗಿರುವ ಬೆನ್ನಲ್ಲೇ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸುತ್ತಿವೆ. ಸಹಜವಾಗಿ ಇದು ಟಿಕೆಟ್‌ ಸಿಗದ ಅಭ್ಯರ್ಥಿಗಳನ್ನು ಗೋಳಾಡುವಂತೆ ಮಾಡುತ್ತದೆ. ಅಂಥದ್ದೇ ಒಂದು ಗೋಳಾಟದ ವಿಡಿಯೋ ವೈರಲ್‌ ಆಗಿದೆ.

ಉತ್ತರ ಪ್ರದೇಶದಲ್ಲಿ ಕೂಡ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಬಿಜೆಪಿಯ ಸಚಿವರು, ಶಾಸಕರ ಪೈಕಿ ಕೆಲವರು ಇದಾಗಲೇ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸೇರಿದ್ದಾರೆ. ಇದರ ಮಧ್ಯೆಯೇ ಕಳೆದ 24 ವರ್ಷಗಳಿಂದ ಬಿಎಸ್‌ಪಿಯ ಕಾರ್ಯಕರ್ತನಾಗಿರುವ ಅರ್ಷದ್ ರಾಣಾ ಅವರಿಗೆ ಟಿಕೆಟ್‌ ದೊರೆಯಲಿಲ್ಲ. ಇದರಿಂದ ಬಹಳ ನೊಂದುಕೊಂಡಿರುವ ಅರ್ಷದ್‌ ಮಾಧ್ಯಮದವರ ಎದುರು ಬಿಕ್ಕಿಬಿಕ್ಕಿ ಅತ್ತಿದ್ದು, ಅದರ ವಿಡಿಯೋ ವೈರಲ್‌ ಆಗಿದೆ.

‘ನಾನು ಏನ್‌ ಮಾಡಲಿ? ನನಗೆ ಎಲ್ಲಾ ಮೋಸ ಮಾಡಿದ್ರು. 24 ವರ್ಷಗಳಿಂದ ಈ ಪಕ್ಷದಲ್ಲಿ ನಿಷ್ಠಾವಂತನಾಗಿ ದುಡಿದೆ. ಟಿಕೆಟ್‌ ಕೊಡಿ ಎಂದರೆ 50 ಲಕ್ಷ ರೂಪಾಯಿ ಕೇಳಿದ್ರು. ನನ್ನ ಬಳಿ ಅಷ್ಟು ಹಣವಿರಲಿಲ್ಲ. ಹೇಗೋ ಹಣ ಹೊಂದಿಸಿ ನಾಲ್ಕೂವರೆ ಲಕ್ಷ ರೂಪಾಯಿ ಕೊಟ್ಟೆ. ಉಳಿದ ಹಣ ಕೊಡುತ್ತೇನೆ ಅಂದರೂ ಈಗ ನೋಡಿದ್ರೆ ನನಗೆ ಟಿಕೆಟ್‌ ಕೊಡಲಿಲ್ಲ ಎಂದು ಕಣ್ಣೀರು ಸುರಿಸಿದರು.

ಈಗ ಕೇಳಿದರೆ ಒಬ್ಬರೂ ಸರಿಯಾಗಿ ನನ್ನನ್ನು ಮಾತನಾಡಿಸುತ್ತಿಲ್ಲ. ನನಗೇಕೆ ಟಿಕೆಟ್‌ ಕೊಡಲಿಲ್ಲ ಎಂದು ಕೇಳಿದರೆ ಸರಿಯಾಗಿ ಉತ್ತರಿಸುತ್ತಿಲ್ಲ. ನಾನೇನು ಮೋಸ ಮಾಡಿದ್ದೆ ಎಂದು ರಾಣಾ ಅಳುತ್ತಿದ್ದು, ಅದೀಗ ಭಾರಿ ವೈರಲ್‌ ಆಗಿದೆ.

ಇಲ್ಲಿವೆ ನೋಡಿ ವಿಡಿಯೋ: