ನ್ಯೂಸ್

VIDEO: ಅತ್ತೆಗೊಂದು ಕಾಲ... ಸೊಸೆಗೊಂದು ಕಾಲ ಅಂದ್ರೆ ಇದೇನಾ?

suchetana

ಪ್ರಕೃತಿಯೇ ವಿಸ್ಮಯ ವಿಚಿತ್ರ, ವಿಶೇಷ, ವಿಶಿಷ್ಟ... ಯಾವಾಗ ಏನು ಹೇಗೆ ಬದಲಾಗುತ್ತದೆ ಎನ್ನುವುದೇ ತಿಳಿಯುವುದಿಲ್ಲ. ಇದು ಹೀಗೆಯೇ ಎಂದುಕೊಂಡಾಗಲೇ ಅದು ಹಾಗಲ್ಲ, ಹೀಗೂ ಆಗತ್ತೆ ಎನ್ನುವ ಕುತೂಹಲದ ಘಟನೆಗಳು ಆಗ್ಗಾಗ್ಗೆ ನಡೆಯುತ್ತಲೇ ಇರುತ್ತವೆ.

ಕೆಲವೊಮ್ಮೆ ವಿಜ್ಞಾನ, ವೈಜ್ಞಾನಿಕ ಅಧ್ಯಯನಕ್ಕೂ ಸೆಡ್ಡು ಹೊಡೆಯುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ವಿಶೇಷ ಎನಿಸುವ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದು ಭಾರಿ ಸದ್ದು ಮಾಡುತ್ತಿದೆ.

ಸಾಮಾನ್ಯವಾಗಿ ಆಹಾರ ಸರಪಣಿಯ ವಿಷಯಕ್ಕೆ ಬಂದರೆ, ಒಂದು ಜೀವಿ ಇನ್ನೊಂದು ಜೀವಿಯನ್ನು ತಿಂದು ಬದುಕುತ್ತದೆ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಮಿಡತೆಯನ್ನು ಕಪ್ಪೆ, ಕಪ್ಪೆಯನ್ನು ಹಾವು, ಹಾವನ್ನು ಹದ್ದು ಹೀಗೆ ಒಂದು ಇನ್ನೊಂದನ್ನು ತಿಂದು ಜೀವಿಸುವ ವಿಷಯವನ್ನು ಎಲ್ಲರೂ ಶಾಲೆಯ ಪಠ್ಯದಲ್ಲಿ ಕಲಿತಿದ್ದೇವೆ, ಅದರ ಚಿತ್ರವನ್ನು ನೋಡಿದ್ದೇವೆ. ಇದರ ಅರ್ಥ ಹಾವು ಕಪ್ಪೆಯನ್ನು ಗುಳುಂ ಎಂದು ನುಂಗುವುದು ಸರ್ವೇ ಸಾಮಾನ್ಯ. ಇದರಲ್ಲೇನೂ ವಿಶೇಷತೆ ಇಲ್ಲ.

ಆದರೆ ಈ ವಿಡಿಯೋ ಇದಕ್ಕೆ ವಿರುದ್ಧವಾಗಿದೆ, ಅದಕ್ಕಾಗಿಯೇ ಇಷ್ಟೊಂದು ಸದ್ದು ಮಾಡುತ್ತಿದೆ. ಅದೇನೆಂದರೆ ಇಲ್ಲಿ ಕಪ್ಪೆಯೇ ಹಾವನ್ನು ನುಂಗಿದೆ! ನಿಜಕ್ಕೂ ಅಚ್ಚರಿ ಎನ್ನುವ ಘಟನೆ ಇದಾಗಿದೆ. ಕಪ್ಪೆ ಹಾವನ್ನು ಹಿಡಿದದ್ದು ಮಾತ್ರವಲ್ಲದೇ, ಅದನ್ನು ಸಂಪೂರ್ಣವಾಗಿ ನುಂಗಿ ಹಾಕಿದೆ.

ಇದಕ್ಕೆ ಹಲವಾರು ಮಂದಿ ನೀಡಿರುವ ಕಮೆಂಟ್​ ಎಂದರೆ ಅತ್ತೆಗೊಂದು ಕಾಲ... ಸೊಸೆಗೊಂದು ಕಾಲ ಎನ್ನೋ ಹಾಗೆ ಹಾವಿಗೊಂದು ಕಾಲ... ಕಪ್ಪೆಗೊಂದು ಕಾಲ... ಎಂದಿದ್ದಾರೆ!

ನಂಬಲು ಅಸಾಧ್ಯ ಎನಿಸಿರುವ ಈ ವಿಡಿಯೋವನ್ನು ನೀವೂ ನೋಡಿ ಎನ್​ಜಾಯ್​ ಮಾಡಿ...

ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ