ಸೇಲಂ (ತಮಿಳುನಾಡು): 2000ನೇ ದಶಕದಲ್ಲಿ ಇಡೀ ಕರ್ನಾಟಕ, ತಮಿಳುನಾಡನ್ನೆ ಬೆಚ್ಚಿಬೀಳಿಸಿದ್ದ ದಂತಕಥೆ ಕಾಡುಗಳ್ಳ ವೀರಪ್ಪನ್ ಅಣ್ಣ ಇಂದು ಜೈಲಿನಲ್ಲಿ ಮೃತಪಟ್ಟಿದ್ದಾನೆ. ಕಳೆದ 34 ವರ್ಷಗಳಿಂದ ಜೈಲಿನಲ್ಲಿಯೇ ಇದ್ದ ಮಾದಯ್ಯನ್ ಸೇಲಂ ಮೃತಪಟ್ಟಿದ್ದಾರೆ. ಈತನಿಗೆ 80 ವರ್ಷ ವಯಸ್ಸಾಗಿತ್ತು.
1987ರ ಅರಣ್ಯ ಸಿಬ್ಬಂದಿ ಚಿದಂಬರಂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈರೋಡ್ನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹೀಗಾಗಿ, ಕಳೆದ 34 ವರ್ಷಗಳಿಂದ ಜೈಲಿನಲ್ಲಿಯೇ ಇದ್ದ. ಕೊಲೆ ಪ್ರಕರಣದಲ್ಲಿ ಮೈಸೂರಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಈತನನ್ನು ಕೊನೆಗೆ ಕೊಯಮತ್ತೂರು ಮತ್ತು ಸೇಲಂ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. .
ಇದೇ ಒಂದನೇ ತಾರೀಖು ತೀವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಮೃತಪಟ್ಟಿದ್ದಾನೆ.