ನ್ಯೂಸ್

ಉತ್ಪಾದನಾ ತಂತ್ರಜ್ಞಾನ ಸಂಸ್ಥೆಗೆ ಪ್ರಾಜೆಕ್ಟ್ ಫೆಲೋಗಳಿಗೆ ಆಹ್ವಾನ

ಬೆಂಗಳೂರಿನಲ್ಲಿರುವ ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್‍ಸ್ಟಿಟ್ಯೂಟ್ (ಸಿಎಂಟಿಐ) ರಾಷ್ಟ್ರೀಯ ಖ್ಯಾತಿಯ ಸಂಸ್ಥೆಯಾಗಿದ್ದು, ಉತ್ಪಾದನಾ ವಿಜ್ಞಾನದ ವಿವಿಧ ಅಂಶಗಳ ಸಂಶೋಧನೆಯಲ್ಲಿ ತೊಡಗಿಕೊಂಡಿದೆ. ಒಟ್ಟು ಹುದ್ದೆಗಳು: 13

ಪ್ರಸ್ತುತ ಸಿಎಂಟಿಐನಲ್ಲಿ ವಿವಿಧ ಪ್ರಾಯೋಜಿತ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಯೋಜನೆಗಳಲ್ಲಿ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ. ಯೋಜನೆಗಳಿಗೆ ಅನುಗುಣವಾಗಿ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ 2 ವರ್ಷದ ಒಪ್ಪಂದಕ್ಕೆ ಹಾಗೂ ಪ್ರಾಜೆಕ್ಟ್ ಫೆಲೋ ಹುದ್ದೆಗೆ 1 ವರ್ಷದ ಒಪ್ಪಂದಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಹುದ್ದೆ, ಸಂಖ್ಯೆ ವಿವರ

* ಪ್ರಾಜೆಕ್ಟ್ ಅಸಿಸ್ಟೆಂಟ್-ಐ - 1

* ಪ್ರಾಜೆಕ್ಟ್ ಫೆಲೋ-ಐ - 2

* ಪ್ರಾಜೆಕ್ಟ್ ಫೆಲೋ-ಐಐ - 10

ಶೈಕ್ಷಣಿಕ ಅರ್ಹತೆ: ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಐಟಿಐ, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್‍ನಲ್ಲಿ ಬಿಇ, ಬಿಟೆಕ್, ಮೆಕಟ್ರೋನಿಕ್ಸ್‍ನಲ್ಲಿ ಎಂಇ, ಎಂ.ಟೆಕ್ ಪದವಿಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ವೃತ್ತಿ ಅನುಭವ ಅವಶ್ಯ.

ಗೌರವಧನ: ಪ್ರಾಜೆಕ್ಟ್ ಅಸಿಸ್ಟೆಂಟ್‍ಗೆ ಮಾಸಿಕ 18,000 ರೂ., ಪ್ರಾಜೆಕ್ಟ್ ಫೆಲೋ-ಐಗೆ 25,000 ರೂ., ಎಂಇ, ಎಂಟೆಕ್ ಆದವರಿಗೆ 28,000 ರೂ., ಪ್ರಾಜೆಕ್ಟ್ ಫೆಲೋ-ಐಐಗೆ 30,000 ರೂ., ಎಂಇ, ಎಂಟೆಕ್ ಆದವರಿಗೆ 32,000 ರೂ. ಗೌರವಧನ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ವೈಯಕ್ತಿಕ, ವೀಡಿಯೋ ಕಾನ್ಫೆರೆನ್ಸ್ ಅಥವಾ ಇತರ ವಿಧಾನದಲ್ಲಿ ಸಂದರ್ಶನ ನಡೆಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 29.1.2021

ಅರ್ಜಿ ಸಲ್ಲಿಸುವ ಮೇಲ್ ಐಡಿ: recruitment.cmti@nic.in

ಅಧಿಸೂಚನೆಗೆ: https://bit.ly/3qcYY4r

ಮಾಹಿತಿಗೆ: 080 22188284 / 22188313

ಇನ್ನೂ ಅನೇಕ ಉದ್ಯೋಗಾವಕಾಶಗಳ ಕುರಿತು  ಇಲ್ಲಿ ಕ್ಲಿಕ್‌ ಮಾಡಿ..